
ಕಾರ್ಕಳ,ಜು.19: ವಿಶ್ವ ತುಳುವೆರ್ (ರಿ) ಪ್ರಚಾರ ನಿರ್ವಾಹಕ ಅಧ್ಯಕ್ಷರಾಗಿ ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ ಅವರು ಆಯ್ಕೆಯಾಗಿದ್ದಾರೆ. ತುಳು ಹಾಗೂ ಕನ್ನಡ ಕಿರುತೆರೆ ನಟನಾಗಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚಿದ ಹೆಗ್ಗಳಿಕೆ ಇವರದ್ದು. ಇಷ್ಟೇ ಅಲ್ಲದೆ ನಮ್ಮ ತುಳುನಾಡು ಟ್ರಸ್ಟಿನ ರಾಜ್ಯ ಸಂಚಾಲಕರಾಗಿ ತುಳು ಭಾಷೆ ತುಳುನಾಡಿಗೆ ದುಡಿದ ಹೆಮ್ಮೆಯೂ ಕೂಡ ಇದೆ, ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡಿದ ಇವರು ಸಮಾಜ ಸೇವಕರು ಕೂಡ ಆಗಿದ್ದಾರೆ.
ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಪ್ರಕಾಶ್ ಸಿಂಫೋನಿ ಆಯ್ಕೆಯಾಗಿದ್ದಾರೆ. ಹಲವಾರು ಸಮಾಜ ಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ, ಮತ್ತು ಕರಾವಳಿ ಕರ್ನಾಟಕ ನೃತ್ಯ ಕಲಾವಿದರ ಸಂಘದ ಅಧ್ಯಕ್ಷರಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ.
ಕೇರಳ ಘಟಕ ಅಧ್ಯಕ್ಷರಾಗಿ ಡಾ ವಾಣಿಶ್ರೀ ಕಾಸರಗೋಡ ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲಿ ಕ್ರೀಡಾ ಧ್ರುವತಾರೆಯಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಇವರು, ಪತಿ ಡಾ. ವೆಂಕಟಗಿರೀಶ್ ಅವರೊಂದಿಗೆ ಕಾಸರಗೋಡಿನ ಚೂರಿಪಳ್ಳದ ನೆಲ್ಲಿಕಟ್ಟೆ ಎಂಬಲ್ಲಿ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯವನ್ನು ತೆರೆದು ಜನರಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ. ತಮ್ಮ ಸಾಹಿತ್ಯ ಕ್ಷೇತ್ರದ ಕಲಾ ಸಾಧನೆಗಾಗಿ, ಕಲಾ ಸಂಸ್ಕೃತಿ ಸಾರಥಿ ಪ್ರಶಸ್ತಿ,ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ, ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ, ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ಗಜ ರತ್ನ ಪ್ರಶಸ್ತಿ , ಗಡಿನಾಡ ಸಾಧಕಿ ಗೌರವ ಸನ್ಮಾನ , ಕರುನಾಡ ವಿಭೂಷಣ ಗೌರವ ಪ್ರಶಸ್ತಿ ,ಕೆಂಪಮ್ಮ ಪುರಸ್ಕಾರವನ್ನು ಪಡೆದಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
