
ಬೆಂಗಳೂರು, ಜು. 21: ಮಗಳು ಪ್ರಾಪ್ತವಯಸ್ಕಳಾದ ನಂತರ ತಂದೆಯಿAದ ದೂರವಾದ ತಕ್ಷಣಕ್ಕೆ, ಆಕೆಯ ಶಿಕ್ಷಣದ ವೆಚ್ಚವನ್ನು ಭರಿಸುವ ಹೊಣೆಗಾರಿಕೆಯಿಂದ ತಂದೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ಮಗಳ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸುವುದು ತಂದೆಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಹೈ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಮಂಗಳೂರು ಮೂಲದ ದಂಪತಿಗಳ ಮಗಳಿಗೆ ಎಂ.ಬಿ.ಬಿ.ಎಸ್ ಕೋರ್ಸ್ಗೆ ಪ್ರವೇಶ ಕೊಡಿಸಲಾಗಿತ್ತು. ಇದಕ್ಕೆ ತಂದೆಯ ಸಮ್ಮತಿಯೂ ಇತ್ತು. ಆದರೆ, ಮಗಳು ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ ದಂಪತಿ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ ಇಬ್ಬರೂ ದೂರವಾಗಿದ್ದರು. ಮಗಳು ನೀಟ್ಪರೀಕ್ಷೆಯ ಮೂಲಕ ಮಂಗಳೂರಿನ ಕಾಲೇಜೊಂದರಲ್ಲಿ ಎಂಡಿ (ಡರ್ಮಟಾಲಜಿ) ಸ್ನಾತಕೋತ್ತರ ಪದವಿಗೆ ಸೀಟು ಪಡೆದುಕೊಂಡ ನಂತರ, ಕಾಲೇಜಿನ ಶುಲ್ಕ 16 ಲಕ್ಷ ರೂ. ಅನ್ನು ಪಾವತಿಸಲು ತಂದೆಗೆ ನಿರ್ದೇಶನ ನೀಡುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದಳು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗೃಹಬಂಧನದಿAದ ಮಹಿಳೆಯರ ರಕ್ಷಣೆ ಕಾಯ್ದೆ, 2005ರ (Pಡಿoಣeಛಿಣioಟಿ oಜಿ Womeಟಿ ಜಿಡಿom ಆomesಣiಛಿ ಗಿioಟeಟಿಛಿe ಂಛಿಣ) ಸೆಕ್ಷನ್ 20(ಜ) ಅಡಿಯಲ್ಲಿ ತಂದೆಯ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಿ, 16 ಲಕ್ಷ ರೂ. ಪಾವತಿಸುವಂತೆ ಆದೇಶಿಸಿತ್ತು. ಇದನ್ನು ತಂದೆಯು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಅಲ್ಲಿಯೂ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಕೊನೆಗೆ ಹೈಕೋರ್ಟ್ಗೆ ರಿವಿಷನ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ಪೀಠವು ತಂದೆಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಾಪ್ತವಯಸ್ಕಳಾದ ಮಗಳಿಗೆ ಕಾಯ್ದೆಯ ಸೆಕ್ಷನ್ 20ರ ಅಡಿಯಲ್ಲಿ ಆರ್ಥಿಕ ಪರಿಹಾರ ಪಡೆಯುವ ಹಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೈಕೋರ್ಟ್, ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣವಾಗಲಿ, ಮಗಳ ಶಿಕ್ಷಣದ ವೆಚ್ಚವನ್ನು ತಂದೆಯೇ ಭರಿಸಬೇಕು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ ಎಂದು ಸ್ಪಷ್ಟಪಡಿಸಿತು.



.
.
.
.
.
.
.
.
.
.
.
.
.
.
.
.
.
.
.
.
