
ಕಾರ್ಕಳ, ಜು,27: ನೀಟ್ ಪ್ರಶ್ನೆ ಪರೀಕ್ಷೆ ಸೋರಿಕೆಯ ವಿಚಾರದಲ್ಲಿ ಯುವ ವಿದ್ಯಾರ್ಥಿಗಳ ಹೋರಾಟ ಸ್ವಾಗತಾರ್ಹ. ಸರ್ಕಾರ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ ಎಂದು ಸಾಮಾಜಿಕ ಚಿಂತಕ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ಜೀವಮಾನದ ಪಿಂಚಣಿ ಎಂಬ ವಿಶೇಷ ಸೌಲಭ್ಯಕ್ಕೂ ತೆರೆ ಬೀಳಬೇಕು. ಒಂದು ಅವಧಿಗೆ ಆಯ್ಕೆಯಾದ ಕಾರಣಕ್ಕೆ ಜೀವನಪರ್ಯಂತ ಜನರ ತೆರಿಗೆ ಹಣದಿಂದ ಪಿಂಚಣಿ ಪಡೆಯುವ ವ್ಯವಸ್ಥೆ ಪ್ರಜಾಪ್ರಭುತ ್ವದ ಆತ್ಮಕ್ಕೆ ವಿರುದ್ಧವಾಗಿದೆ. ಸಾಮಾನ್ಯ ಸರ್ಕಾರಿ ನೌಕರರು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿಯಮಾನುಸಾರ ಪಿಂಚಣಿ ಪಡೆಯುತ್ತಾರೆ. ಆದರೆ ಕೆಲವೇ ವರ್ಷಗಳ ಕಾಲ ಜನಪ್ರತಿನಿಧಿಯಾಗಿದ್ದವರು ಜೀವಮಾನದ ಪಿಂಚಣಿಗೆ ಅರ್ಹರಾಗುವುದು ನ್ಯಾಯವೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಇದು ಜನಪ್ರತಿನಿಧಿಗಳ ವಿರುದ್ಧದ ಹೋರಾಟವಲ್ಲ, ಬದಲಾಗಿ ಜನರ ತೆರಿಗೆ ಹಣದ ದುರ್ಬಳಕೆಯ ವಿರುದ್ಧದ ಹೋರಾಟ. ರಾಜಕೀಯವು ಸೇವೆಯಾಗಬೇಕು, ಜೀವಮಾನದ ಆರ್ಥಿಕ ಸೌಲಭ್ಯ ಪಡೆಯುವ ಸಾಧನವಾಗಬಾರದು. ಶ್ರೀಲಂಕಾದಲ್ಲಿ ಜನಪ್ರತಿನಿಧಿಗಳ ವಿಶೇಷ ಸವಲತ್ತುಗಳು ಮತ್ತು ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸುವ ದಿಕ್ಕಿನಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಭಾರತದಲ್ಲಿಯೂ ಈ ಕುರಿತು ಗಂಭೀರ ಚರ್ಚೆ ಆರಂಭವಾಗಿ, ಜನಪ್ರತಿನಿಧಿಗಳ ಪಿಂಚಣಿ ವ್ಯವಸ್ಥೆಯನ್ನು ಮರುಪರಿಶೀಲಿಸಿ ಅಗತ್ಯವಿದ್ದರೆ ರದ್ದುಗೊಳಿಸುವ ಧೈರ್ಯವನ್ನು ಸರ್ಕಾರಗಳು ತೋರಿಸಬೇಕು. ದೇಶದ ಖಜಾನೆ ಮೊದಲು ಜನರ ಕಲ್ಯಾಣಕ್ಕೆ ಮೀಸಲಾಗಬೇಕು. ಜನಸೇವೆಗೆ ಬರುವವರು ಸೇವಾ ಮನೋಭಾವದಿಂದ ಬರಬೇಕು, ಜೀವಮಾನದ ಸೌಲಭ್ಯಗಳ ನಿರೀಕ್ಷೆಯಿಟ್ಟು ರಾಜಕೀಯಕ್ಕೆ ಬರಬಾರದು ಎಂದು ನೇಮಿರಾಜ್ ರೈ ಹೇಳಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
