
ಕಾರ್ಕಳ,ಜು.31: ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಕೇರ ಲಂಗಾಜೆ ಮನೆ ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಬು ಗೌಡ (75ವ) ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದು ಮಕ್ಕಳು ಅವರ ಊಟೋಪಚಾರಗಳನ್ನು ನೋಡಿಕೊಳ್ಳುತ್ತಿದ್ದರು. ಎಂದಿನAತೆ ಜು.29 ರಂದು ಸಂಜೆ ಬಾಬು ಗೌಡ ಅವರ ಮಗಳು ಶೋಭಾ ತಂದೆಗೆ ಊಟ ಕೊಟ್ಟು ಬಂದಿದ್ದು, ಮರುದಿನ ಬೆಳಿಗ್ಗೆ ತಿಂಡಿ ಕೊಡಲು ಹೋದಾಗ ತಂದೆ ಮನೆಯಲ್ಲಿರದೆ ನಾಪತ್ತೆಯಾಗಿದ್ದರು. ಮನೆಯವರು ಸೇರಿ ಅವರನ್ನು ಹುಡುಕಾಡುತ್ತಿದ್ದ ವೇಳೆ ಜು,31 ರಂದು ಬೆಳಗ್ಗೆ ಮನೆಯ ಸಮೀಪದ ಸರಕಾರಿ ಬಾವಿಯ ಬಳಿ ಬಾಬುಗೌಡ ಧರಿಸಿದ ಚಪ್ಪಲಿ ದೊರೆತಿದ್ದು, ಬಾವಿಯನ್ನು ಪರಿಶೀಲಿಸಿದಾಗ ಅವರ ಮೃತದೇಹ ಪತ್ತೆಯಾಗಿದೆ.
ಬಾಬು ಗೌಡ ಅವರು ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದು ದೇ ಕಾರಣಕ್ಕೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಅವರ ಪುತ್ರ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
