

ಕಾರ್ಕಳ,ಸೆ.12: ಕಲ್ಯಾ ಗ್ರಾಮದಲ್ಲಿ ಅನಧಿಕೃತ ಜಲ್ಲಿ ಕ್ರಶರಗಳು ಕಾರ್ಯಾಚರಿಸುತ್ತಿದ್ದು, ಇದರ ಮಾಲಕರು ಸರ್ಕಾರಕ್ಕೆ ನಯಾಪೈಸೆ ರಾಜಸ್ವ ಪಾವತಿಸದೇ ಅವ್ಯಾಹತವಾಗಿ ಗಣಿ ಸಂಪತ್ತು ದೋಚುತ್ತಿದ್ದಾರೆ. ಕ್ರಶರ್ ಗಳ ಗಣಿಲೂಟಿ ವಿರುದ್ಧ ದೂರುಗಳು ಬಂದ ಹಿನ್ನಲೆಯಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಪ್ರಸನ್ನ ಅವರ ನೇತೃತ್ವದ ಪೊಲೀಸರ ತಂಡ ಮೊಹಮ್ಮದ್ ಶಫಿರವರ ಸಿಎಮ್ಎಸ್ ಸ್ಟೋನ್ ಕ್ರಶರ್ ಗೆ ದಾಳಿ ನಡೆಸಿದೆ.
ಪುಡಿಗೈದ ಬಂಡೆಗಳನ್ನು ಹಿಟಾಚಿ ಯಂತ್ರಗಳ ಮೂಲಕ ಕ್ರಶರ್ ಗೆ ಸಾಗಿಸಿ ಜಲ್ಲಿ ಮತ್ತು ಎಂ ಸ್ಯಾಂಡ್ಗಳನ್ನು ಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರ ದಾಳಿ ಸಂದರ್ಭದಲ್ಲಿ ಕ್ರಶರ್ ನಲ್ಲಿ ಲಾರಿ ಚಾಲಕ ಜಗದೀಶ್ ಎಂಬಾತ ಎಂ ಸ್ಯಾಂಡ್ ಮರಳನ್ನು ಲೋಡ್ ಮಾಡುತ್ತಿದ್ದ ವೇಳೆ ಪೊಲೀಸರು ಕ್ರಶರ್ ಮಾಲೀಕರ ವಿವರ ಪಡೆದಿದ್ದು,ಮಾಳ ಗ್ರಾಮದ ರಂಜಿತ್ ಹಾಗೂ ಮೊಹಮ್ಮದ್ ಶಫಿ ಎಂಬವರು ಯಾವುದೇ ಪರವಾನಿಗೆ ಇಲ್ಲದೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಚಾಲಕ ಜಗದೀಶ್ ಮಾಹಿತಿ ನೀಡಿದ್ದಾರೆ. ಇದಲ್ಲದೇ ಸಿಎಮ್ಎಸ್ ಸ್ಟೋನ್ ಕ್ರಶರ್ನ ಪರವಾನಿಗೆಯ ಅವಧಿಯು ಮುಕ್ತಾಯವಾಗಿ ತುಂಬಾ ವರ್ಷಗಳೇ ಕಳೆದಿದೆ ಎಂಬ ಮಾಹಿತಿ ಬಯಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾರ್ಕಳ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ತೆರಿಗೆ ವಂಚಿಸಿ ಗಣಿ ಲೂಟಿ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
