
ಕಾರ್ಕಳ,ಆ.01: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕ್ಯಾಶ್ಯು ಫ್ಯಾಕ್ಟರಿ ಒಂದರ ಕಟ್ಟಡದ ಮೇಲೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಸಬಾ ಗ್ರಾಮದ ವಿ.ಕೆ ಕ್ಯಾಶ್ಯು ಫ್ಯಾಕ್ಟರಿ ಕಟ್ಟಡದ ಮೇಲೆ ಜು.26 ರಂದು ಉಮರಾಲಿ, ಶರೀಫ್, ಇಮ್ರಾನ್,ಇಬ್ರಾಹಿಂ ಮತ್ತು ಹುಸೇನ್ ಎಂಬವರು ಸೇರಿಕೊಂಡು ಸೋಲಾರ್ ಪೆನಲ್ ಕಳಚುವ ಕೆಲಸ ಮಾಡುತ್ತಿದ್ದಾಗ ಉಮರಾಲಿ(56ವ) ಅವರು ಆಯತಪ್ಪಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಕಟ್ಟಡ ಮಾಲೀಕ ರೋಶನ್ ಮತ್ತು ಕೆಲಸ ಮಾಡಿಸುವ ವಿಶ್ವನಾಥ ಅವರ ನಿರ್ಲಕ್ಷ್ಯತನವೇ ಎಂದು ಆರೋಪಿಸಲಾಗಿದೆ. ಗಾಯಾಳು ಉಮರಾಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
