

ಹೆಬ್ರಿ,ಆ.14: ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ಸಿಬ್ಬಂದಿ ಮನೆ ತೆರಿಗೆಯಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕಿಗೆ ಜಮಾ ಮಾಡದೆ ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಿವಪುರ ಗ್ರಾಮ ಪಂಚಾಯತ್ನಲ್ಲಿ ಬಿಲ್ಲು ವಸೂಲಿಗಾರನಾದ ಸಿಬ್ಬಂದಿ ಮಂಜುನಾಥ(40) ಎಂಬಾತ 2023-24 ನೇ ಸಾಲಿನಲ್ಲಿ 1,18,367 ರೂ. ಹಾಗೂ 2024-25 ರಲ್ಲಿ 3,36,021 ರೂ. ಮನೆ ತೆರಿಗೆಯಲ್ಲಿ ವಸೂಲಾದ ಒಟ್ಟು ರೂ. 4,54,388 ಹಣವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪಂಚಾಯತ್ ಪಿಡಿಒ ಅಶೋಕ್ ಅವರು ಹೆಬ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
