

ಕಾರ್ಕಳ, ಆ.21: ಕಾರ್ಕಳ ಗ್ರಾಮಾಂತರ ಠಾಣೆಯ ಎಸ್‌ಐ ನವೀನ್ ಬೋರ್ಕರ್ ನೇತೃತ್ವದ ಪೊಲೀಸರ ತಂಡ ಠಾಣಾ ಸರಹದ್ದಿನ ಬೆಳ್ಮಣ್ ಎಂಬಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿ ಇದ್ದಾಗ ಕಿನ್ನಿಗೋಳಿ ಸಮೀಪದ ಏಳಿಂಜೆ ಕಡೆಯಿಂದ ಮುಂಡ್ಕೂರು ಕಡೆಗೆ ಟಾಟಾ ಏಸ್ ಪಿಕಪ್ ನಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಸಿಬ್ಬಂದಿಯರ ಜೊತೆ ಮುಂಡ್ಕೂರು ಗ್ರಾಮದ ಸಂಕಲಕರಿಯ ಬಸ್ ನಿಲ್ದಾಣದ ಹತ್ತಿರ ಆ.21 ರಂದು ಬೆಳಿಗ್ಗೆ 9:15 ಗಂಟೆಗೆ ತೆರಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಟಾಟಾ ಪಿಕಪ್ ವಾಹನದಲ್ಲಿ ಒಂದು ಗಂಡು ಮತ್ತು ಎರಡು ಹೆಣ್ಣು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಹಗ್ಗಗಳಿಂದ ಕಟ್ಟಿ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಚಾಲಕ ಜಯ ಮೂಲ್ಯ ಎಂಬಾತನ ಬಳಿ ವಿಚಾರಿಸಿದಾಗ ರೋಶ್ನಿ ಎಂಬವರಿAದ ಜಾನುವಾರುಗಳನ್ನು ಖರೀದಿಸಿ ಮಾಂಸ ಮಾಡುವವರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿ ಹೇಳಿದ್ದಾನೆ.
ಈ ಹಿನ್ನಲೆಯಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
