

ಕಾರ್ಕಳ, ಆ.19: ಅನಾರೋಗ್ಯದಿಂದ ಬಳುತ್ತಿದ್ದ ವ್ಯಕ್ತಿಯೊಬ್ಬರು ಜೀವನಲ್ಲಿ ಜಿಗುಪ್ಸೆಗೊಂಡು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿ ನಡೆದಿದೆ. ಪಳ್ಳಿಯ ನಿವಾಸಿ ಪ್ರೇಮನಾಥ ಆಚಾರ್ಯ(67) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಮೃತ ಪ್ರೇಮನಾಥ ಆಚಾರ್ಯ ಮರದ ಕೆಲಸ ಕೆಲಸ ಮಾಡಿಕೊಂಡಿದ್ದು, ಕೆಲವು ಸಮಯದಿಂದ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು.ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಮದ್ಯಪಾನ ಚಟ ಹೊಂದಿದ್ದ ಅವರು ಮಾನಸಿಕವಾಗಿ ಖಿನ್ನರಾಗಿದ್ದರು. ಪ್ರೇಮನಾಥ ಆಚಾರ್ಯ ಆ 17ರಂದು ತನ್ನ ಮಗನ ಮನೆಯಾದ ಬೆಳ್ಮಣ್ಣಿನಿಂದ ತನ್ನ ಮನೆಯಾದ ಪಳ್ಳಿ ಗ್ರಾಮದ ಸಿದ್ಧಿಗುರಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಬಳಿಕ ತನ್ನದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡಿದ್ದಾರೆ.
ಉಸಿರಾಟದ ತೊಂದರೆ ಹಾಗೂ ಮದ್ಯ ಸೇವಿಸುವ ಚಟವಿದ್ದು ಇದರಿಂದ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
