

ಬೆಂಗಳೂರು, ಆ. 28: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್’ರಾಜ್ ಇಲಾಖೆಯಲ್ಲಿ ಸಚಿವರಾಗಿದ್ದಾಗ ನೇಮಕಾತಿ ಅಕ್ರಮ ನಡೆದಿದೆ.
ತರಾತುರಿಯಲ್ಲಿ ಎಇಇಗಳ ನೇಮಕಾತಿ ಮಾಡಿಕೊಂಡಿದ್ದು, ಈ ಅಕ್ರಮದ ಕುರಿತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತರಾತುರಿಯಲ್ಲಿ 24 ಎಇಇ ನೇಮಕ ಮಾಡಿದ್ದು ಯಾಕೆ ಎಂದ ಹೆಚ್‌ಡಿಕೆ, ಈ ಕುರಿತು OMR ಶೀಟ್ ಮತ್ತು ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ. ತರಾತುರಿಯಲ್ಲಿ ಕೊಡಬಾರದೆಂದು ಕೋರ್ಟ್ ಆದೇಶವಿದೆ. ಹೀಗಿದ್ದರೂ ನೇಮಕಾತಿ ಯಾಕೆ ಮಾಡಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಎಲ್ಲದರಲ್ಲೂ ನಾನು ಪಾರದರ್ಶಕ, ಪರಿಶುದ್ಧವಾಗಿ ಇದ್ದೇನೆ ಅಂತ ಹೇಳುತ್ತಾರೆ. ನಾನು ಅಧಿಕಾರಕ್ಕೆ ಬಂದ್ರೆ ಎಲ್ಲವೂ ಕ್ಲೀನ್ ಮಾಡ್ತೇನೆ ಅಂದವರು ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. RSS ಅಕೌಂಟ್ ಬಗ್ಗೆ ದಿನಾ ಕೇಳುವ ನೀವು ನಿಮ್ಮ ನಾಲಗೆ ಸರಿ ಇಟ್ಟುಕೊಳ್ಳಿ. ಆಡುಮುಟ್ಟಿದ ಸೊಪ್ಪಿಲ್ಲ ಅನ್ನೋ ಹಾಗೆ ನೀವು ಚರ್ಚಿಸದ ವಿಚಾರವೇ ಇಲ್ಲ. KPSC ಹಗರಣ ಸಂಬAಧ ಎಕ್ಸಾಂ ಕಂಟ್ರೋಲರ್ ಜ್ಞಾನೇಂದ್ರ ಕುಮಾರ್ ಆರೋಗ್ಯ ಸರಿಯಿಲ್ಲ ಎಂದು ಸಚಿವರೇ ಹೇಳಿದ್ದರು. ಊರಿಗೆ ಹೋಗಿದ್ದಾರೆ ಇನ್ನೆರಡು ದಿನಗಳಲ್ಲಿ ವಾಪಸ್ ಬರುತ್ತಾರೆ ಅಂದಿದ್ದರು. ಆ ಬಳಿಕ ಅವರೇ ಜ್ಞಾನೇಂದ್ರ ಎಲ್ಲಿದ್ದಾರೋ ಗೊತ್ತಿಲ್ಲ ಅಂತಾರೆ. ಗೊತ್ತಿಲ್ಲ ಅಂದಮೇಲೆ ಗೃಹ ಇಲಾಖೆ ಯಾಕೆ ನಡೆಸುತ್ತೀರಿ ಎಂದು ಹೆಚ್‌ಡಿಕೆ ಕಿಡಿ ಕಾರಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
