

ಉಡುಪಿ,ಸೆ.10: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರೂಂ ಬುಕ್ ಮಾಡುವ ಭಕ್ತರನ್ನು ವಂಚಿಸಲು ನಕಲಿ ವೆಬ್ಸೈಟ್ ರಚಿಸಲಾಗಿದೆ ಎಂಬ ಆರೋಪದ ಮೇಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಹೋಟೆಲ್ ಅಕಾಮಡೇಶನ್ ಹೆಸರಿನಲ್ಲಿ ಜಗದಂಬಿಕಾ ಅತಿಥಿ ಗೃಹದ ಹೆಸರಿನಲ್ಲಿ ಅನಧಿಕೃತ ವೆಬ್ಸೈಟ್ ರಚಿಸಿ ಹಣ ಗಳಿಸುವ ಉದ್ದೇಶದಿಂದ ನಂತರ ವಾಟ್ಸಾಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಪಾವತಿಗಾಗಿ ಕ್ಯೂಆರ್ ಕೋಡ್ಗಳನ್ನು ಹಂಚಿಕೊಂಡಿದ್ದು ಹಣ ಪಾವತಿಯಾದ ನಂತರ ನಕಲಿ ರಶೀದಿಗಳನ್ನು ನೀಡಿದ್ದಾರೆ.
ಭಕ್ತರು ಇದನ್ನು ನಂಬಿ ದೇವಸ್ಥಾನಕ್ಕೆ ತೆರಳಿದಾಗ ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ದೂರಿನ ಆಧಾರದ ಮೇಲೆ, ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
