

ಕಾರ್ಕಳ, ಸೆ.15: ಕಾರ್ಕಳ ತಾಲೂಕು ಕಚೇರಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ಪಾರ್ಕಿನಲ್ಲಿ ಕಡವೆಯ ಮೃತದೇಹ ಪತ್ತೆಯಾಗಿದೆ. ಮಂಗಳವಾರ ಮುಂಜಾನೆ ವಾಕಿಂಗ್ ಬಂದವರು ಕಡವೆ ಸತ್ತು ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕುಕ್ಕುಂದೂರು ಗ್ರಾಮದ ಪರಪು ನಕ್ರೆ ಅರಣ್ಯ ಪ್ರದೇಶದಿಂದ ಆಹಾರ ಹುಡುಕಿಕೊಂಡು ಅಥವಾ ದಾರಿ ತಪ್ಪಿ ಪೇಟೆಗೆ ಬಂದಿರುವ ಶಂಕೆ ವ್ಯಕ್ತವಾಗಿದ್ದು, ನಾಯಿಗಳು ಅಟ್ಟಿಸಿಕೊಂಡು ಬಂದ ಪರಿಣಾಮವಾಗಿ ಪಾರ್ಕಿನಲ್ಲಿ ಅಡಗಿ ಕೂತಿರುವ ಸಾಧ್ಯತೆಯಿದೆ, ಮುಂಜಾನೆ ವಾಕಿಂಗ್ ಮಾಡಲು ಬಂದ ಜನರನ್ನು ಕಂಡು ಆವರಣ ಗೋಡೆ ಹಾರುವ ಭರದಲ್ಲಿ ಕೊಂಬು ಆವರಣ ಗೋಡೆಯ ಕಬ್ಬಿಣ ರಾಡ್ ಗಳಿಗೆ ಸಿಲುಕಿ ಭಯದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂದು ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ. ಮೃತ ಕಡವೆಯು ಸುಮಾರು 2 ವರ್ಷ ಪ್ರಾಯದ ಗಂಡು ಕಡವೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಬಳಿಕ ದಫನ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ







.
.
.
.
.
.
.
.
.
.
.
.
.
.
.
.
.
.
.
.
