

ಕಾರ್ಕಳ, ಸೆ.15: ಕಾರ್ಕಳದ ಪುಲ್ಕೇರಿ ಬೈಪಾಸ್ ಸರ್ಕಲ್ ಬಳಿಯಿರುವ ಹೋಟೇಲ್ ಒಂದರಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕಾರ್ಕಳದ ತೆಳ್ಳಾರು ನಿವಾಸಿ ಶಿವಾನಂದ ಸುವರ್ಣ(38) ಎಂಬವರು ಸಾವನ್ನಪ್ಪಿದ್ದು, ಕಳೆದ ಎರಡು ದಿನಗಳ ಹಿಂದೆ ಲಾಡ್ಜಿಂಗ್ ನಲ್ಲಿ ರೂಮ್ ಬುಕ್ ಮಾಡಿದ್ದರು. ಸೋಮವಾರ ರಾತ್ರಿ ತಾನು ತಂಗಿದ್ದ ಕೊಠಡಿಯ ಬಾತ್ ರೂಮ್ ನಲ್ಲಿ ಶಿವಾನಂದ ಅವರ ಶವ ಪತ್ತೆಯಾಗಿದೆ.
ಮೃತ ಶಿವಾನಂದ ಸುವರ್ಣ ಅವಿವಾಹಿತರಾಗಿದ್ದು, ಉದ್ಯೋಗವಿಲ್ಲದೇ ವಿಪರೀತ ಕುಡಿತದ ಚಟ ಹೊಂದಿದ್ದರು. ಕುಡಿತಕ್ಕೆ ಮನೆಯವರಿಂದಲೇ ಹಣ ಪಡೆಯುತ್ತಿದ್ದರು. ಇದಲ್ಲದೇ ಟ್ಯಾಕಿ ಕಾರ್ಡಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸರಿಯಾಗಿ ಚಿಕಿತ್ಸೆ ಪಡೆಯದೇ ಮಾನಸಿಕವಾಗಿ ಖಿನ್ನರಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಆದರೆ ವೈದ್ಯರು ಹೆಚ್ಚಿನ ಚಿಕತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ಆದರೆ ಶಿವಾನಂದ ಆಸ್ಪತ್ರೆಗೆ ಹೋಗದೇ ಎರಡು ದಿನಗಳಿಂದÀ ಕಾರ್ಕಳದ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಸೋಮವಾರ ಸಂಜೆ ತಾನು ಉಳಿದುಕೊಂಡಿದ್ದ ರೂಮಿನ ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಮೃತದೇಹದ ಪಕ್ಕ ಬಾಟಲಿ ಪತ್ತೆಯಾಗಿದ್ದು, ಅನಾರೋಗ್ಯದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಕುರಿತು ಅಸಹಜ ಸಾವು ಪ್ರಕರಣ ದಾಖಲಾಗಿದೆ.







.
.
.
.
.
.
.
.
.
.
.
.
.
.
.
.
.
.
.
.
