

ನವದೆಹಲಿ,ಸೆ.17: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ದೀರ್ಘಾಯುಸು, ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ‘ಆಶೀರ್ವಾದ ಕಾ ದಿಯಾ’ ಅಭಿಯಾನದಡಿ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 17 ರಂದು ಸಂಜೆ 6 ರಿಂದ ರಾತ್ರಿ 7 ರೊಳಗೆ ಎಲ್ಲರೂ ದೀಪ ಬೆಳಗುವ ಮೂಲಕ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ. 2014 ರಿಂದೀಚೆಗೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಮಹತ್ವದ ಪರಿವರ್ತನೆಗಳಾಗಿದ್ದು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದೊAದಿಗೆ ದೇಶವು ಮುನ್ನಡೆಯುತ್ತಿದೆ ಎಂದು ಅವರು ಬಣ್ಣಿಸಿದ್ದಾರೆ.
ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿ ಸೇರಿದಂತೆ 25 ವರ್ಷಗಳ ಅವಿರತ ಸೇವೆಯನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಪಕ್ಷವು ತಿಂಗಳಿಡೀ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಹಮ್ಮಿಕೊಂಡಿದೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ನಿತಿನ್ ನಬಿನ್ ಅವರು ಮಧ್ಯಪ್ರದೇಶದ ಇಂದೋರ್ ಮತ್ತು ಉಜ್ಜಯಿನಿಗೆ ಭೇಟಿ ನೀಡಲಿದ್ದಾರೆ. ಉಜ್ಜಯಿನಿಯ ರಾಮ್ ಘಾಟ್‌ನಲ್ಲಿ ಪ್ರಧಾನಿಯವರ ಆರೋಗ್ಯಕ್ಕಾಗಿ ‘ಆಶೀರ್ವಾದ ಕಾ ದಿಯಾ’ ಬೆಳಗಲಿದ್ದು, ಇಂದೋರ್‌ನಲ್ಲಿ ‘ಸ್ವಾಮಿತ್ವ ಯೋಜನೆ’ಯಡಿ ಬೃಹತ್ ಸಾರ್ವಜನಿಕ ಕಲ್ಯಾಣ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಶುಕ್ರವಾರ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಡೆಯುವ ಪವಿತ್ರ ಭಸ್ಮ ಆರತಿಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.
ದೇಶಾದ್ಯಂತ 700 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಪ್ರಧಾನಿಯವರ ಒಳಿತಿಗಾಗಿ ದೀಪಗಳನ್ನು ಬೆಳಗಲಾಗುತ್ತಿದೆ. ಇನ್ನು ಪ್ರಧಾನಿ ಮೋದಿಯವರ ಸ್ವಂತ ರಾಜ್ಯವಾದ ಗುಜರಾತ್‌ನಲ್ಲಿ 18,500 ಕ್ಕೂ ಹೆಚ್ಚು ಸ್ಥಳಗಳಲ್ಲಿ 88 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಬೆಳಗುವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಜರಾತ್‌ನ ವಡ್ನಾಗರದಲ್ಲಿ ಬೈಕ್ ರಾಲಿಗೆ ಚಾಲನೆ ನೀಡುವುದರ ಜತೆಗೆ, ಶರ್ಮಿಷ್ಠಾ ಸರೋವರದ ತೀರದಲ್ಲಿ ಮಹಾ ಆರತಿ ಹಾಗೂ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಈ ‘ಸೇವಾ ಸಂಕಲ್ಪ ಅಭಿಯಾನ’ ಮುಂದುವರಿಯಲಿದೆ.
ಪ್ರಧಾನಿ ಮೋದಿಗೆ ಸಿಕ್ಕ 1498 ಉಡುಗೊರೆಗಳು ಇ-ಹರಾಜು
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕವಾಗಿ ದೊರೆತ ಒಟ್ಟು 1,498 ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸಾರ್ವಜನಿಕ ಹರಾಜಿಗಾಗಿ ಇರಿಸಲಾಗಿದ್ದು, ಸಂಸ್ಕೃತಿ ಸಚಿವಾಲಯವು ಇದರ ಎಂಟನೇ ಆವೃತ್ತಿಯ ಇ-ಹರಾಜನ್ನು ಸೆಪ್ಟೆಂಬರ್ 17 ರಂದು ಅಧಿಕೃತವಾಗಿ ಪ್ರಾರಂಭಿಸಲಿದೆ.
ಸAಗ್ರಹದಲ್ಲಿ 50 ವಸ್ತುಗಳನ್ನು “ಹೀರೋ ಆಬ್ಜೆಕ್ಟ್ಸ್” ಎಂದು ಗುರುತಿಸಲಾಗಿದೆ. ಕರ್ನಾಟಕದಿಂದ ಬಂದಿರುವ ಭಗವಾನ್ ಶ್ರೀರಾಮನ ಬೆಳ್ಳಿಯ ಸ್ಮರಣಿಕೆಯು ಅತ್ಯಧಿಕವಾಗಿ ?13.50 ಲಕ್ಷ ಮೂಲ ಬೆಲೆಯನ್ನು ಹೊಂದಿದೆ. ಇದರ ನಂತರ ಕಲಾ ತೋರಣದ ಬೆಳ್ಳಿಯ ಪ್ರತಿಕೃತಿ (?9 ಲಕ್ಷ), “ಟ್ರೀ ಆಫ್ ಲೈಫ್” ಎಂಬ ಫ್ರೇಮ್ ಮಾಡಲಾದ ಗೊಂಡ ಕಲಾಕೃತಿ (?7.50 ಲಕ್ಷ), ರಥದ ಮೇಲಿರುವ ಜಗನ್ನಾಥ ಪರಿವಾರದ ಕೃತಿ (?6 ಲಕ್ಷ) ಹಾಗೂ ಶೇ 99.99 ರಷ್ಟು ಶುದ್ಧ ಚಿನ್ನದ ಲೇಪಿತ ರಾಧಾ-ಕೃಷ್ಣ ಕಲಾಕೃತಿ (?5.40 ಲಕ್ಷ) ಪ್ರಮುಖವಾಗಿವೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂ, ಬಿಹಾರ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಈ ಸ್ಮರಣಿಕೆಗಳನ್ನು ಸಂಗ್ರಹಿಸಲಾಗಿದೆ. ಭಾರತದ ಕಲಾ ಪರಂಪರೆ, ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಈ ವಸ್ತುಗಳು ಬಿಂಬಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಪ್ರಧಾನಿಯವರು ದೇಶಕ್ಕೆ ಸಿಕ್ಕಿದ ಕಾಣಿಕೆಗಳನ್ನು ಎಂದಿಗೂ ಸ್ವಂತಕ್ಕಾಗಿ ಇಟ್ಟುಕೊಂಡಿಲ್ಲ, ಬದಲಿಗೆ ಅವುಗಳನ್ನು ಸಾರ್ವಜನಿಕರಿಗೆ ಮರಳಿ ನೀಡುವ ಸದುದ್ದೇಶ ಹೊಂದಿದ್ದಾರೆ ಎಂದು ಪ್ರಶಂಸಿಸಿದರು. 2019 ರ ಜನವರಿಯಲ್ಲಿ ಮೊದಲ ಬಾರಿಗೆ ಆರಂಭವಾದ ಈ ಹರಾಜು ಪ್ರಕ್ರಿಯೆಯಿಂದ ಇಲ್ಲಿಯವರೆಗೆ ಒಟ್ಟು ?52 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
