Share this news

ಮಂಗಳೂರು, ಸೆ 18: ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆ ಮೂಲಕ ಕರಾವಳಿ ಭಾಗದ ಪ್ರಗತಿಗೆ ಹೊಸ ಮುನ್ನುಡಿ ಬರೆಯಲಾಗಿದ್ದು, ಸಂಪುಟ ಸಭೆಯಲ್ಲಿ 40 ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಡಿಕೆ ಶಿವಕುಮಾರ್​,ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಇಲ್ಲಿನ ಇತಿಹಾಸ ಮತ್ತು ಪರಂಪರೆಯನ್ನು ರಾಷ್ಟ್ರವೇ ಗೌರವಿಸುತ್ತದೆ. ಈ ಜಿಲ್ಲೆಗೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ, ನಾನು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ಹೊರಗೆ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಜನರ ಮುಂದೆ ಕೂತಿದ್ದೇನೆ. ಭಾವನಾತ್ಮಕ ವಿಚಾರಗಳಲ್ಲಿ ರಾಜಕೀಯ ಮಾಡಲ್ಲ ಜನರ ಬದುಕಿನ ವಿಚಾರದಲ್ಲಿ ರಾಜಕೀಯ ಮಾಡುವುದಾಗಿ ಹೇಳಿದರು.

ಇಂದಿನ ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಅಭಿವೃದ್ಧಿ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಪೈಕಿ 16,000 ಕೋಟಿ ರೂ ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿ ರೂ ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ 14,000 ಕೋಟಿ ರೂ ಅನುದಾನ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.

‘ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಹೊಸ ಟೂರಿಸಂ ನೀತಿಯನ್ನು ಮೂಲಸೌಕರ್ಯ ಯೋಜನೆಯನ್ನಾಗಿ ರೂಪಿಸಿ ಜಾರಿಗೆ ತರಲಾಗುತ್ತಿದೆ. ಮೀನುಗಾರಿಕೆ, ಸಾಗರ ಅಧ್ಯಯನ ಮತ್ತು ಬ್ಲೂ ಎಕನಾಮಿಕ್ಸ್‌ಗಾಗಿ ಪ್ರತ್ಯೇಕ ಯೂನಿವರ್ಸಿಟಿ ಸ್ಥಾಪಿಸಲಾಗುವುದು ಹಾಗೂ ಸೀಟುಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಹೆಚ್ಚಿಸಲಾಗುವುದು. ಇನ್ನು ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇನ್ನು ಮುಂದಿನ 15 ತಿಂಗಳಲ್ಲಿ ರಾಜ್ಯದ 10 ರಿಂದ 12 ಜಿಲ್ಲೆಗಳಲ್ಲಿ ಇದೇ ರೀತಿ ಸಂಪುಟ ಸಭೆಗಳನ್ನು ನಡೆಸಿ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಡಿಕೆ ಶಿವಕುಮಾರ್​​ ಹೇಳಿದ್ದಾರೆ.

ಯಾವ ಯಾವ ಯೋಜನೆಗೆ ಎಷ್ಟು ಅನುದಾನ?

ಲೈಟ್ ಹೌಸ್ ಮತ್ತು ಅದರ ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ 60.34 ಕೋಟಿ ರೂ ಅನುದಾನ.
ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರು ಅಭಿವೃದ್ಧಿಗೆ 6,925 ಕೋಟಿ ರೂ ಅನುದಾನ.
ಉಡುಪಿಯ ಮಲ್ಪೆಯಲ್ಲಿ ಪಿಪಿಪಿ ಮಾದರಿ ಯೋಜನೆಗಾಗಿ 179 ಕೋಟಿ ರೂ ಅನುದಾನ.
ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಅಂಗವಾಗಿ ಭಾರತೀಯ ನೌಕಾಪಡೆಯಿಂದ 250 ಕೋಟಿ ರೂ ವೆಚ್ಚದಲ್ಲಿ ರನ್‌ವೇ ನಿರ್ಮಾಣ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಟೆಪುರದಿಂದ ಚರ್ವತ್ತೂರು ಸಂಪರ್ಕ ಯೋಜನೆಗೆ ಅನುದಾನ.
ಮಂಗಳೂರು-ಅತ್ರಾಡಿ ಮಾರ್ಗದ ಮರವೂರು ಸೇತುವೆ ಕಾಮಗಾರಿಗೆ 40 ಕೋಟಿ ರೂ ಅನುದಾನ.
ಕಟೀಲು ರಸ್ತೆ ಅಭಿವೃದ್ಧಿಗೆ 33 ಕೋಟಿ ರೂ ಅನುದಾನ.
ಮೂಲ್ಕಿಯ ದಾಮಸ್ ಕಟ್ಟೆ ಬಳಿಯ ಪಲಿಮಾರ್ ಕಟ್ಟೆ ಸೇತುವೆ ನಿರ್ಮಾಣಕ್ಕೆ 25 ಕೋಟಿ ರೂ ಅನುದಾನ.
ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ ಅನುದಾನ.
ಕದ್ರಿಯ 5 ಎಕರೆ ಜಾಗದಲ್ಲಿ ‘ಮಂಗಳೂರು ಐ’ ನಿರ್ಮಾಣ.
ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ 425 ಕೋಟಿ ರೂ ಅನುದಾನ.

ಮಠ-ಮಾನ್ಯಗಳು ದೇವಾಲಯಗಳ ಅಭಿವೃದ್ಧಿಗೆ ಬಂಪರ್‌ ಗಿಫ್ಟ್:

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ,5.ಕೋ.ರೂ ಅನುದಾನ, ಒಡಿಯೂರು ಮಠ, ವಿಟ್ಲ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ, ಶ್ರೀಧಾಮ ಮಾಣಿಲ ಮಠ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.,ಮಾಣಿಲಾ ಗ್ರಾಮ ಕುಕ್ಕಾಜೆ ಕಾಳಿಕಾಂಬ ಆಂಜನೇಯ ಸ್ವಾಮಿ ಕ್ಷೇತ್ರ: 1 ಕೋಟಿ ರೂ.,ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ, ಕನ್ಯಾನ ಗ್ರಾಮ: 1 ಕೋಟಿ ರೂ.,ಪಿಲಿ ಚಾಮುಂಡಿ ದೈವಸ್ಥಾನ ಕೊಂಡನ, ಕೋಟೆಕಾರ್ (ಉಳ್ಳಾಲ): 1 ಕೋಟಿ ರೂ.,ಕನ್ಯಾಡಿ ಶ್ರೀ ರಾಮ ಕ್ಷೇತ್ರ,: 1 ಕೋಟಿ ರೂ. ಶ್ರೀ ಸಾಂದೀಪನಿ ಸಾಧನಾಶ್ರಮ ಕೇಮಾರು ಮಠ, : 1 ಕೋಟಿ ರೂ.ಕಂಬಳಕ್ಕೆ ನೀಡುತ್ತಿದ್ದ 40 ಲಕ್ಷ ರೂ ಅನುದಾನವನ್ನು 1 ಕೋಟಿ ರೂ ಏರಿಕೆ ಮಾಡಲಾಗಿದೆ.

ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೆರವು

ಸೈಯದ್ ಮದನಿ ಜುಮ್ಮಾ ಮಸೀದಿ (ಉಳ್ಳಾಲ ದರ್ಗಾ): 5.00 ಕೋಟಿ ರೂ., ದಾರುನ್ನೂರು ಎಜುಕೇಶನಲ್ ಸೆಂಟರ್, ಕಾಶಿಪಟ್ಣ (ಬೆಳ್ತಂಗಡಿ): 1.50 ಕೋಟಿ ರೂ.,ಅಲ್-ಮರ್ಕಜುಲ್ ಇಸ್ಲಾಮಿ (ರಿ), ಅಡ್ಯಾರ್ (ಮಂಗಳೂರು): 1.50 ಕೋಟಿ ರೂ.,ಶಾಂತಿ ಎಜುಕೇಶನಲ್ ಟ್ರಸ್ಟ್, ಕುತ್ತಾರು/ಬಬ್ಬುಕಟ್ಟೆ (ಉಳ್ಳಾಲ): 1 ಕೋಟಿ ರೂ., ಮರಿಕ್ಕಳ ಜುಮ್ಮಾ ಮಸೀದಿ, ನರಿಂಗಾನ ಗ್ರಾಮ (ಸ್ಟಡಿ ಸೆಂಟರ್ ಮತ್ತು ವಾಚನಾಲಯ): 1 ಕೋಟಿ ರೂ.,ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ, ಕುಂಬ್ರ (ಪುತ್ತೂರು): 1 ಕೋಟಿ ರೂ., ಮರ್ಕಜುಲ್ ಹುದಾ ಮಹಿಳಾ ಕಾಲೇಜು, ಕುಂಬ್ರ (ಪುತ್ತೂರು): 1 ಕೋಟಿ ರೂ.,
ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್,ಮಂಗಳೂರು: 1 ಕೋಟಿ ರೂ.,ಸಂತ ಜೋಸೆಫ್ ವಾಜ್ ಶ್ರೈನ್, ಮುಡಿಪು (ಉಳ್ಳಾಲ):1 ಕೋಟಿ ರೂ.,ಇನ್‌ಫೆಂಟ್ ಜೀಸಸ್ ಶ್ರೈನ್, ಬಿಕರ್ನಕಟ್ಟೆ (ಮಂಗಳೂರು): 50 ಲಕ್ಷ ರೂ. ಸೇಂಟ್ ಲಾರೆನ್ಸ್ ಶ್ರೈನ್,,ಬೊಂದೇಲ್ (ಮಂಗಳೂರು): 50 ಲಕ್ಷ ರೂ,

ಮೀನುಗಾರಿಕೆಗೆ ಕೈಗಾರಿಕಾ ಸ್ಪರ್ಶ ನೀಡಲು ನಿರ್ಧರಿಸಲಾಗಿದ್ದು, ಮುಲ್ಕಿಯಲ್ಲಿ 150 ಎಕರೆಯಲ್ಲಿ ಬೃಹತ್ ಫಿಶರೀಸ್ ಪಾರ್ಕ್  ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಮುಲ್ಕಿ ತಾಲೂಕಿನ ಕೊಲ್ಲೂರು, ಬಳ್ಳುಂಜೆ ಮತ್ತು ಉಳಿಪಾಡಿ ಗ್ರಾಮಗಳಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ 316.79 ಎಕರೆ ಜಮೀನಿನ ಪೈಕಿ 150 ಎಕರೆ ಜಾಗವನ್ನು ಫಿಶರೀಸ್ ಪಾರ್ಕ್‌ಗಾಗಿ ಮೀಸಲಿಡಲಾಗಿದೆ. ಜೊತೆಗೆ ಹೆಬ್ರಿ ತಾಲೂಕಿನ ಕೆರೆಬೆಟ್ಟು, ಶಿವಪುರ ಗ್ರಾಮಗಳಲ್ಲಿ 113.89 ಎಕರೆ ಜಮೀನಿನಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಡೇಟಾ ಸೆಂಟರ್‌ಗಳು, ನೂತನ ಕಾರ್ಖಾನೆಗಳು, ಉತ್ಪಾದನಾ ಘಟಕಗಳ ಸ್ಥಾಪನೆಗೆ ಜಮೀನು ಹಂಚಿಕೆ ಮಾಡಲಾಗಿದೆ.

 

 

 

 

     

.

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *