

ಕಾರ್ಕಳ, ಸೆ.26: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಇನ್ಸ್ಪೈರ್ ಮಾನಕ್ ಮಾದರಿ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿ, ಕುಕ್ಕುಜೆ ಪ್ರೌಢಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ “ಕಟ್-ಇಟ್- (Cut It Easy) ಈಸಿಎಂಬ ಯಂತ್ರದ ಮಾದರಿಯನ್ನು ರಚಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕುಕ್ಕುಜೆ ಪ್ರೌಢಶಾಲೆಯ ವಿದ್ಯಾರ್ಥಿ ಎಳ್ಳಾರೆ ಆದಿತ್ಯ ಹರೀಶ್ ಪೂಜಾರಿಯವರನ್ನು ಮಾತಿಬೆಟ್ಟು ಬಿಲ್ಲವ ಸಂಘದ ಯುವ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತಿಬೆಟ್ಟು ಬಿಲ್ಲವ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ಸಂಜೀವ ಪೂಜಾರಿ ಕಡ್ತಲ, ಸತೀಶ್ ಪೂಜಾರಿ ಎಳ್ಳಾರೆ, ಭಾಸ್ಕರ್ ಪೂಜಾರಿ, ಸುಜಿತ್ ಕಡ್ತಲ, ಹರೀಶ್ ಪೂಜಾರಿ,ರತ್ನಾಕರ್ ಪೂಜಾರಿ ಪೆರ್ಮನ್ , ರೋಶನ್ ಮುಳ್ಳಾಡು ಯುವ ಘಟಕದ ಅಧ್ಯಕ್ಷರಾದ ರಂಜಿತ್ ಸುವರ್ಣ, ಕಾರ್ಯದರ್ಶಿ ಅಮರ್ನಾಥ್, ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
