Share this news

ಕಾರ್ಕಳ, ಸೆ. 28:ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆ ಮರುನಿರ್ಮಾಣಕ್ಕೆ ಆಗ್ರಹಿಸಿ ಶಾಸಕ ಸುನಿಲ್ ಕುಮಾರ್ ಪ್ರಾಯೋಜಿತ ಜನಾಗ್ರಹ ಸಭೆಯು ಶಾಸಕರ ಕಳೆದುಹೋದ ಮಾನ ಉಳಿಸಿಕೊಳ್ಳಲು ಮಾಡಿದ ಪ್ರಯತ್ನವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಶುಭದ ರಾವ್ ಆರೋಪಿಸಿದರು.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಸೆ. 28ರಂದು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಪ್ರತಿಮೆ ನಿರ್ಮಾಣದ ಬಗ್ಗೆ ಸಾರ್ವಜನಿಕ ಜನಾಗ್ರಹ ಸಭೆಯನ್ನು ಬೈಲೂರಿನ ಮಾರಿಗುಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಆ ಸಭೆಯನ್ನು ಬಿಜೆಪಿ ಅಥವಾ ಬಿಜೆಪಿಯ ಯಾವುದೇ ಪಧಾದಿಕಾರಿಗಳು ಆಯೋಜಿಸಿದ್ದರೆ ನಾವು ಹೋಗುತ್ತಿರಲಿಲ್ಲ ನಮಗೆ ಹೋಗುವ ಅಗತ್ಯವೂ ಇಲ್ಲ. ಆದರೆ ಸಾರ್ವಜನಿಕ ಸಮಿತಿ ಎಂದ ಕಾರಣ ನಮ್ಮ ಅಭಿಪ್ರಾಯ ನೀಡಲು ಹೋಗಿದ್ದೆವು‌ ಆದರೆ ಅಲ್ಲಿ ಹೋದ ನಂತರ ಗೊತ್ತಾಯಿತು ಅದು ಶಾಸಕ ಸುನೀಲ್ ಕುಮಾರ್ ಪ್ರಯೋಜಿತ ಸಭೆಯಾಗಿತ್ತು ಮತ್ತು ಅವರ ಉದ್ದೇಶ ಶಾಸಕರ ತಪ್ಪನ್ನು ಸಮರ್ಥಿಸುವುದೇ ಆಗಿತ್ತು ಹಾಗಾಗಿ ನಮಗೆ ಅವಕಾಶ ನೀಡಲಿಲ್ಲ ಆದರೂ‌ ನಾವು ದೇವಸ್ಥಾನ ಒಳಗೆ ಹೋಗಿ ಪ್ರತಿಮೆ ನೈಜ್ಯತೆಯ ಬಗ್ಗೆ ನಮ್ಮ ಪ್ರಮಾಣ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ ಬಂದಿದ್ದೇವೆ ಎಂದು ಶುಭದ ರಾವ್ ಹೇಳಿದರು.

ಪರಶುರಾಮನ ಪ್ರತಿಮೆ ಮರು ಸ್ಥಾಪನೆಗೆ ಉದಯ್ ಶೆಟ್ಟಿಯವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೊರ್ಟ್ ವಿಭಾಗಿಯ ಪೀಠ ವಿಷಯವನ್ನು ರಾಜ್ಯ ಸರಕಾರದ ಅಂಗಳಕ್ಕೆ ವರ್ಗಾಯಿಸಿದೆ.
ಮನವಿಯನ್ನು ಪರಿಗಣಿಸುವಾಗ ನಿರ್ಮಿತಿ ಕೇಂದ್ರಕ್ಕೆ ನೋಟೀಸ್ ನೀಡಿ ಅವರ ವಾದವನ್ನು ಆಲಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದ್ದು ಉದಯ ಶೆಟ್ಟಿಯವರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು. ಪ್ರತಿಮೆಯ ಮರುಸ್ಥಾಪನೆಗೆ ಆಗ್ರಹಿಸಿ ಉದಯ್ ಶೆಟ್ಟಿಯವರು ಸರಕಾರಕ್ಕೆ ಈಗಾಗಲೇ ಮನವಿಯನ್ನು ಸಲ್ಲಿಸಿದ್ದಾರೆ.

ಹೈಕೋರ್ಟ್ ಈ ಅಭಿಪ್ರಾಯವು ಅಸಲಿ ಪ್ರತಿಮೆಯ ನಿರ್ಮಾಣದ ವಿಚಾರವಾಗಿ ನಾವು ಯಾವ ಆಶಯವನ್ನು ಮೊದಲಿನಿಂದಲೂ ವ್ಯಕ್ತಪಡಿಸುತ್ತಾ ಬಂದಿದ್ದೇವೆಯೋ ಅದಕ್ಕೆ ಶಕ್ತಿ ತುಂಬಿದೆ ಹಾಗಾಗಿ ಹೈಕೊರ್ಟಿನ ಈ ಅಭಿಪ್ರಾಯ ನಕಲಿ ಪ್ರತಿಮೆ ನಿರ್ಮಾಣ ಮಾಡಿರುವ ಶಾಸಕರನ್ನು ಸಮರ್ಥಿಸುವವರ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಗೂಬೆಕೂರಿಸಲು ಪ್ರಯತ್ನಿಸವವರ ಕಣ್ಣನ್ನು ಇನ್ನಾದರೂ ತೆರೆಸಲಿ ಎಂದು ಶುಭದ ಸಲಹೆ ನೀಡಿದರು.
ಥೀಮ್ ಪಾರ್ಕ್ ವಿಚಾರವಾಗಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ, ಪಾರ್ಕ್ ನಿರ್ಮಾಣಗೊಂಡ ಜಮೀನು ಗೋಮಾಳವಾಗಿರುವುದರಿಂದ ಮೊದಲು ಅದು ಪಾರ್ಕ್ ಹೆಸರಿಗೆ ವರ್ಗಾವಣೆಯಾಗಬೇಕು,
ಬೆಟ್ಟದ ಮೇಲೆ ಅಸಲಿ ಕಂಚಿನ ಪ್ರತಿಮೆ ನಿರ್ಮಾಣವಾಗಬೇಕು, ಮತ್ತು ಪ್ರತಿಮೆಯ ಪ್ರಸ್ತುತ ಪರಿಸ್ಥಿತಿಗೆ ಕಾರಣಕರ್ತರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುವ ನಮ್ಮ ಬದ್ಧತೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಣೈ,ಕಾಂಗ್ರೆಸ್ ಮುಖಂಡ ಅಂತೋನಿ ಮಿರಾಂದ ರಂಗನಪಲ್ಕೆ ಉಪಸ್ಥಿತರಿದ್ದರು.

 

 

 

 

 

 

 

     

.

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *