

ಕಾರ್ಕಳ, ಸೆ.29: ಹೊಸ ಮನೆಯನ್ನು ತನಗೆ ಬಿಟ್ಟುಕೊಡಬೇಕೆಂದು ದಿನನಿತ್ಯ ಕುಡುಕ ಮಗ ತಂದೆತಾಯಿಯನ್ನು ಪೀಡಿಸುತ್ತಿದ್ದ ಹಿನ್ನಲೆಯಲ್ಲಿ ಬೇಸತ್ತ ತಂದೆ ಮಗನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರು ಎಂಬಲ್ಲಿ ನಡೆದಿದೆ.
ಕೇರಳ ಮೂಲದ ತ್ರೆಸಿಯಾಮ್ (65) ಎಂಬವರು ಪ್ರಸ್ತುತ ಕಾರ್ಕಳದ ತೆಳ್ಳಾರು ದುರ್ಗಾ ಗ್ರಾಮದ ಪುಲ್ಲಾಟ್ ಎಂಬಲ್ಲಿ ಗಂಡ ಮಥಾಯ್ ಮಗ ಚಾಲ್ಸ್ ಮತ್ತು ಮೊಮ್ಮಗಳು ಸಾನ್ವಿ ಯೊಂದಿಗೆ ಕಳೆದ 17 ವರ್ಷಗಳಿಂದ ವಾಸವಾಗಿದ್ದಾರೆ. ಚಾಲ್ಸ್ ವಿಪರೀತ ಮದ್ಯಪಾ£ದÀ ಚಟ ಹೊಂದಿದ್ದು, ಅವರ ಪತ್ನಿ ಕಳೆದ 2018 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತ್ರೆಸಿಯಾಮ್ ಅವರು ತಮ್ಮ ಮನೆಯ ಸಮೀಪವೇ ಇನ್ನೊಂದು ಮನೆಯನ್ನು ಕಟ್ಟುತ್ತಿದ್ದು, ಮಗ ಚಾಲ್ಸ್ ಹೊಸ ಮನೆಯನ್ನು ತನಗೆ ಬಿಟ್ಟುಕೊಡಬೇಕೆಂದು ಆಗಾಗ ಜಗಳವಾಡುತ್ತಿದ್ದ. ಅದೇ ರೀತಿ ಸೋಮವಾರ (ಸೆ.28) ಮತ್ತೆ ತನ್ನ ತಾಯಿಯೊಂದಿಗೆ ಜಗಳವಾಡಿದ್ದು, ಜಗಳ ಬಿಡಿಸಲು ಬಂದ ತಂದೆ ಮಥಾಯ್ ಅವರನ್ನು ತಳ್ಳಿದ್ದಾನೆ. ಆ ಬಳಿಕ ಹೊಸದಾಗಿ ಕಟ್ಟುತ್ತಿದ್ದ ಮನೆಯ ಶೆಡ್ ಬಳಿ ಕುಳಿತಿದ್ದಾಗ ಮತ್ತೆ ಬಂದ ಮಗ ಚಾಲ್ಸ್ ತಂದೆಗೆ ಹಲ್ಲೆ ನಡೆಸಲು ಮುಂದಗಿದ್ದಾನೆ. ಈ ವೇಳೆ ಕೋಪಗೊಂಡ ತಂದೆ ಮಗನಿಗೆ ಕತ್ತಿಯಿಮದ ಹಲ್ಲೆ ನಡೆಸಿದ್ದು, ಚಾಲ್ಸ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






.
.
.
.
.
.
.
.
.
.
.
.
.
.
.
.
.
.
.
.
