

ಕಾರ್ಕಳ, ಸೆ.29: ಹಿರ್ಗಾನ ಗ್ರಾಮದ ಹೆರ್ಮುಂಡೆಯ ಸುವರ್ಣ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಹಿರ್ಗಾನ ಗ್ರಾಮದ ಪೇಂಟಿAಗ್ ವೃತ್ತಿಯ ಭರತ್ ಪೂಜಾರಿ(29) ಹಾಗೂ ಹರ್ಷನ್ ಆಚಾರ್ಯ(23) ಎಂಬವರು ಮೃತಪಟ್ಟ ಯುವಕರು. ಮಂಗಳವಾರ ಕೆಲಸಕ್ಕೆ ರಜೆಯಿದ್ದ ಕಾರಣದಿಂದ ಮಧ್ಯಾಹ್ನ ಭರತ್, ಹರ್ಷನ್ ಸೇರಿ ಐವರು ಸ್ನೇಹಿತರು ಸ್ನಾನಕ್ಕೆಂದು ಹೆರ್ಮುಂಡೆ ನದಿಗೆ ಹೋಗಿದ್ದರು. ಹಿರ್ಗಾನದ ಮಂಗಿಲಾರು ಎಂಬಲ್ಲಿನ ಸುಮಾರು 2 ಕಿಮೀ ದುರ್ಗಮ ದಾರಿಯಲ್ಲಿ ನಡೆದುಕೊಂಡು ಹೋಗಿ ನದಿಯಲ್ಲಿ ಈಜಾಟ ನಡೆಸುತ್ತಿದ್ದ ವೇಳೆ ಭರತ್ ಹಾಗೂ ಹರ್ಷನ್ ಏಕಾಎಕಿ ನೀರಿನಲ್ಲಿ ಸ್ನಾನ ಮಾಡುತ್ತಾ ನೀರಿನ ಆಳಕ್ಕೆ ಹೋದಾಗ ಈಜಲು ಬಾರದೇ ಮುಳುಗಿ ದಾರುಣವಾಗಿ ಉಸಿರು ಚೆಲ್ಲಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ವಾಹನಗಳ ಸಂಚಾರಕ್ಕೆ ದಾರಿಯ ವ್ಯವಸ್ಥೆö ಇಲ್ಲದೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಮ್ಮ ರಕ್ಷಣಾ ಸಲಕರಣೆಗಳೊಂದಿಗೆ ಸುಮಾರು 3 ಕಿ.ಮೀ ದೂರ ನಡೆದುಕೊಂಡೇ ಸಾಗಬೇಕಾಯಿತು. ಘಟನಾ ಸ್ಥಳಕ್ಕೆ ತೆರಳಿದ ಹೊತ್ತಿಗೆ ಯುವಕರಿಬ್ಬರು ಮುಳುಗಿ ಶವಗಳು ನೀರಿನಾಳದಲ್ಲಿ ಸಿಲುಕಿಕೊಂಡಿದ್ದವು. ಬಳಿಕ ಅಗ್ನಿಶಾಮಕ ದಳದ ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದ ತಂಡÀ ಸ್ಥಳೀಯರ ಸಹಕಾರದೊಂದಿಗೆ ನಿರಂತರ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮುಳುಗಿದ್ದ ಶವಗಳನ್ನು ಮೇಲೆತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರೂಪೇಶ್, ಸುರೇಶ,ನಿತ್ಯಾನಂದ ,ದಿನೇಶ್, ಮುಜಾಮಿಲ್ ಹಾಗೂ ಚಾಲಕ ಶಿವಾನಂದ ಭಾಗಿಯಾಗಿದ್ದರು.
ಗೃಹ ಪ್ರವೇಶದ ಕನಸು ಕಂಡ ಯುವಕ ವಿಧಿಯ ಕ್ರೂರ ಲೀಲೆಗೆ ಬಲಿ:
ಮೃತಪಟ್ಟವರ ಪೈಕಿ ಭರತ್ ಪೂಜಾರಿ ಎಂಬ ಯುವಕ ಕಷ್ಟಪಟ್ಟು ದುಡಿದು ಸಂಸಾರದ ಜೀವನ ನಿರ್ವಹಣೆಯ ಹೊಣೆ ಹೊತ್ತುಕೊಂಡಿದ್ದರು.ಪೈAಟಿAಗ್ ಕೆಲಸ ಮಾಡಿಕೊಂಡಿದ್ದ ಭರತ್ ದುಡಿಮೆಯ ಜೊತೆಗೆ ವಾಸಕ್ಕೆ ಸಣ್ಣ ಮನೆ ನಿರ್ಮಿಸಬೇಕೆನ್ನುವ ಕನಸು ಕಂಡು ಮನೆಯ ಕಾಮಗಾರಿ ಆರಂಭಿಸಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ಸ್ಲಾಬ್ ಹಂತದ ತಲುಪಿ ಇನ್ನೇನು ಕೆಲವೇ ತಿಂಗಳಲ್ಲಿ ಗೃಹ ಪ್ರವೇಶದ ಕನಸು ಕಂಡಿದ್ದರು. ಆದರೆ ವಿಧಿಲೀಲೆಯೇ ಬೇರೆಯಾಗಿತ್ತು. ಬಾಳಿ ಬದುಕಬೇಕಿದ್ದ ಯುವಕನನ್ನು ಜವರಾಯ ನೀರಿನ ರೂಪದಲ್ಲಿ ಬಲಿಪಡೆದಿರುವುದು ನಿಜಕ್ಕೂ ದುರಂತವೇ ಸರಿ.
ಈ ಹಿಂದೆ ಸಾಕಷ್ಟು ಬಾರಿ ಇಂತಹ ದುರಂತಗಳು ಸಂಭವಿಸಿದ್ದು, ಇದೀಗ ಮತ್ತೆ ದುರಂತ ಮರುಕಳಿಸಿದೆ. ನೀರಿನ ಜೊತೆ ಸರಸವಾಡಿದರೆ ಜೀವಕ್ಕೆ ಆಪತ್ತು ಖಚಿತ, ಆಧ್ದರಿಂದ ಈಜು ಬಾರದವರು ಎಂದಿಗೂ ನೀರಗೆ ಇಳಿಯಲೇಬಾರದು, ಯಾಕೆಂದರೆ ಜೀವ ಅಮೂಲ್ಯ.






.
.
.
.
.
.
.
.
.
.
.
.
.
.
.
.
.
.
.
.
