

ಬೆಂಗಳೂರು,ಅ.03: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಕಡತಗಳು ದೀರ್ಘಕಾಲ ಬಾಕಿ ಉಳಿಯುವುದನ್ನು ತಡೆಗಟ್ಟಲು ಮತ್ತು ಸಕಾಲಿಕವಾಗಿ ವಿಲೇವಾರಿ ಮಾಡಲು ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಚಿವಾಲಯ ಕೈಪಿಡಿಯ ನಿಯಮಗಳನ್ನು ಉಲ್ಲೇಖಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ರಾಜ್ಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
‘ತಕ್ಷಣ’ ಅಥವಾ ‘ತುರ್ತು’ ಎಂದು ನಮೂದಿಸಲಾದ ಸ್ವೀಕೃತಿ ಮತ್ತು ಕಡತಗಳನ್ನು ಶಾಖಾಧಿಕಾರಿಗಳು ಹಾಗೂ ಮೇಲ್ಪಟ್ಟ ಅಧಿಕಾರಿಗಳು ಕೇವಲ ಒಂದು ಕೆಲಸದ ದಿನದೊಳಗೆ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ಒಂದು ವೇಳೆ ವಿಳಂಬವಾದರೆ ಸಂಬAಧಪಟ್ಟ ಮೇಲಾಧಿಕಾರಿಗಳಿಗೆ ಸೂಕ್ತ ಕಾರಣ ಸಹಿತ ವಿವರಣೆ ನೀಡಬೇಕು. ಕಿರಿಯ ಸಹಾಯಕರು ಅಥವಾ ತತ್ಸಮಾನ ನೌಕರರು ಹಿಂದಿನ ತಿಂಗಳ ಅಂತ್ಯದವರೆಗೆ ಬಾಕಿ ಇರುವ ಹಾಗೂ ವಿಲೇವಾರಿಯಾದ ಎಲ್ಲಾ ಕಡತಗಳು ಮತ್ತು ಸ್ವೀಕೃತಿಗಳ ಪಟ್ಟಿಯನ್ನು ಪ್ರತಿ ತಿಂಗಳ 3ನೇ ಕೆಲಸದ ದಿನದೊಳಗೆ ಸಿದ್ಧಪಡಿಸಬೇಕು. ಬಾಕಿ ಇರುವ ಕಡತಗಳ ಪರಿಶೀಲನೆಗೆ ಹಂತಗಳನ್ನು ನಿಗದಿಪಡಿಸಲಾಗಿದೆ. 2 ವರ್ಷಗಳೊಳಗೆ ಬಾಕಿ ಇರುವ ಕಡತಗಳನ್ನು ಅಧೀನ ಕಾರ್ಯದರ್ಶಿಗಳು, 2 ರಿಂದ 4 ವರ್ಷ ಬಾಕಿ ಇರುವ ಕಡತಗಳನ್ನು ಅಪರ/ಜಂಟಿ/ಉಪ ಕಾರ್ಯದರ್ಶಿಗಳು ಹಾಗೂ 4 ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇರುವ ಕಡತಗಳನ್ನು ಆಯಾ ಇಲಾಖಾ ಕಾರ್ಯದರ್ಶಿಗಳು ಪ್ರತಿ ತಿಂಗಳು ಪರಿಶೀಲಿಸಬೇಕು.
3 ತಿಂಗಳಿಗಿAತ ಹೆಚ್ಚು ಕಾಲ ಅಂತಿಮ ಆದೇಶಕ್ಕೆ ಬಾಕಿ ಇರುವ ಪ್ರಕರಣಗಳನ್ನು ಇಲಾಖಾ ಮುಖ್ಯಸ್ಥರು ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಅಲ್ಲದೆ, 1 ತಿಂಗಳಿಗಿAತ ಹೆಚ್ಚು ಕಾಲ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಿ ಕಾರ್ಯದರ್ಶಿಗಳು ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಚಿವರ ಬಳಿ ಬಾಕಿ ಉಳಿದಿರುವ ಕಡತಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿ, ಮುಂದಿನ ತಿಂಗಳ ಮೊದಲ ವಾರದೊಳಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸುವಂತೆ ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಕಡತಗಳ ವಿಲೇವಾರಿಗೆ ಸಂಬAಧಿಸಿದAತೆ ಕೈಗೊಂಡ ಕ್ರಮಗಳ ವರದಿಯನ್ನು ಪ್ರತಿ ತಿಂಗಳ 2ನೇ ಸೋಮವಾರದಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಪಿ. ಅವರು ಆದೇಶಿಸಿದ್ದಾರೆ. ಈ ಮೂಲಕ ಸಚಿವಾಲಯ ಮಟ್ಟದಲ್ಲಿ ಕಡತಗಳ ವಿಲೇವಾರಿ ಪ್ರಕ್ರಿಯೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
