

ಬೆಂಗಳೂರು,ಅ.10: ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಸ್ಟೋರ್‌ಗಳು ಔಷಧಗಳನ್ನು ದುಬಾರಿ ಬೆಲೆಗೆ ಮಾರಿ ಸಾರ್ವಜನಿಕರನ್ನು ಸುಲಿಗೆ ಮಾಡುವುದಕ್ಕೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರದ ಔಷಧ ನಿಯಂತ್ರಣ ಇಲಾಖೆ (FDA) ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ರಾಜ್ಯದ ಎಲ್ಲಾ ಆಸ್ಪತ್ರೆಗಳ ಬಿಲ್‌ಗಳಲ್ಲಿ ಔಷಧಗಳ ಖರೀದಿ ಬೆಲೆ Landing/Base Price) ಹಾಗೂ ಎಂಆರ್‌ಪಿ (MRP) ಎರಡನ್ನೂ ಕಡ್ಡಾಯವಾಗಿ ನಮೂದಿಸಬೇಕು ಎಂದು ಆದೇಶಿಸಲಾಗಿದೆ.
ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳಿಗೆ ಇದು ಅನ್ವಯವಾಗಲಿದ್ದು, ನವೆಂಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಆ ಮೂಲಕ ಆಸ್ಪತ್ರೆಗಳಲ್ಲಿ ಔಷಧ, ವೈದ್ಯಕೀಯ ಉಪಕರಣಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಗೆ ಪಾರದರ್ಶಕತೆಯನ್ನು ತರಲು ಮತ್ತು ಗ್ರಾಹಕರಿಗೆ ಆಗುವ ಅನ್ಯಾಯವನ್ನು ತಡೆಯಲು ಮಹತ್ವದ ಹೆಜ್ಜೆಯಾಗಿದೆ. ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ನಂಬರ್, ತಯಾರಿಕೆ ದಿನಾಂಕ, ಎಕ್ಸ್‌ಪೈರಿ ದಿನಾಂಕ ಬಿಲ್‌ನಲ್ಲಿ ಇರಬೇಕು. ರೋಗಿಗೆ ವಿಧಿಸುವ ದರ ಎಂಆರ್‌ಪಿ ಮೀರಬಾರದು ಎಂದು ಎಫ್ಡಿಎ ಸೂಚನೆ ನೀಡಿದೆ.
ಆಸ್ಪತ್ರೆಗಳು ರೋಗಿಗಳಿಂದ ಮನಬಂದAತೆ ಹಣ ವಸೂಲಿ ಮಾಡುವುದನ್ನು ತಡೆಯಲು ಮತ್ತು ರೋಗಿಗಳಿಗೆ ತಮಗಾಗುತ್ತಿರುವ ನಷ್ಟದ ಅರಿವು ಮೂಡಿಸಲು ಈ ಕ್ರಮ ಸಹಕಾರಿಯಾಗಿದೆ.ಇದರೊಂದಿಗೆ, ಗರಿಷ್ಠ ಲಾಭಾಂಶದ ಮೇಲೆಯೂ ಮಿತಿ ಹೇರಲು ಹಾಗೂ ಅಗತ್ಯ ಔಷಧಗಳ ಪಟ್ಟಿಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರವು ಕೇಂದ್ರದ ‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ಕ್ಕೆ (NPPA) ಪ್ರಸ್ತಾವನೆ ಸಲ್ಲಿಸಿದೆ





.
.
.
.
.
.
.
.
.
.
.
.
.
.
.
.
.
.
.
.
