

ಕಾರ್ಕಳ,ಅ.21: ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ಆವರಣವಿಲ್ಲದ ಬಾವಿಗೆ ಬೃಹತ್ ಗಾತ್ರದ ಚಿರತೆಯನ್ನು ಕಾರ್ಕಳ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮುಜಕಿಲ ಎಂಬಲ್ಲಿನ ನಿವಾಸಿ ಅಂತೋನಿ ಎಂಬವರ ಬಂದ ಚಿರತೆ ಮನೆಯ ನಾಯಿಯನ್ನು ಹಿಡಿಯಲು ಬೆನ್ನಟ್ಟಿದಾಗ ಆವರಣವಿಲ್ಲದ ತೆರದ ಬಾವಿಗೆ ಬಿದ್ದಿತ್ತು. ಬಾವಿಯ ಪೊಟರೆಯೊಳಗೆ ಸೇರಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನು ಕೆಳಗಿಳಿಸಿ ಚಿರತೆಯನ್ನು ರಕ್ಷಿಸಿದ್ದಾರೆ.
ಸುಮಾರು 5ವರ್ಷ ಪ್ರಾಯದ ಸುಮಾರು 100kg ತೂಕದ ಗಂಡು ಚಿರತೆ ಇದಾಗಿದ್ದು,ಚಿರತೆ ಪ್ರಬಂಧಗಳಲ್ಲಿ ಭಾರೀ ಗಾತ್ರದ ಚಿರತೆಯಾಗಿದೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಕುಮಾರ್, ಸುಧೀರ್ , ಅರಣ್ಯ ರಕ್ಷಕರಾದ ಸುರೇಶ್,ಹಿತೇಶ್ , ಅರಣ್ಯ ವೀಕ್ಷಕರಾದ ಯಮನೂರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.






.
.
.
.
.
.
.
.
.
.
.
.
.
.
.
.
.
.
.
.
