

ಕಾರ್ಕಳ,ಅ.22: ಇಂದಿನ ವಿದ್ಯಾರ್ಥಿಗಳು ಅತ್ಯಂತ ಹೆಚ್ಚು ಕ್ರೀಯಾಶೀಲರಾಗಿರುತ್ತಾರೆ. ಅವರ ಪ್ರತಿಭೆಗಳನ್ನು ಅನಾವರಣಗೊಳಿಸಬೇಕಾದರೆ ಸಾಹಿತ್ಯ, ನಾಟಕ, ಸಾಂಸ್ಕೃತಿಕ ಕ್ರೀಡೆಗಳು ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಖ್ಯಾತ ನಟ, ನಿರ್ದೇಶಕ, ನಾಟಕಕಾರ ಪ್ರಸನ್ನ ಶೆಟ್ಟಿ ಬೈಲೂರು ಹೇಳಿದರು.
ಅವರು ಕಾರ್ಕಳ ಕೆ.ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಅಂತರ್ ಕಾಲೇಜು ಕ್ರಿಕೆಟ್ ಟೂರ್ನಮೆಂಟ್ ನ ಪೂರ್ವಭಾವಿಯಾಗಿ “ಬ್ಯಾನರ್ ರಿಲೀಸ್” ಬ್ಯಾನರ್ ಅನಾವರಣಗೊಳಿಸಿ ಮಾತನಾಡಿ, ಬೆಳ್ಳಿಹಬ್ಬದ ಪೂರ್ವಭಾವಿಯಾಗಿ ನಡೆಯುವ ಕ್ರಿಕೆಟ್ ಟೂರ್ನಮೆಂಟಿನ ಬ್ಯಾನರ್ ರಿಲೀಸ್ ಕಾರ್ಯಕ್ರಮ ಮುಂದಿನ ಕಾರ್ಯಕ್ರಮಗಳಿಗೆ ಉತ್ತಮ ತಳಹದಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಸಂತೋಷವಾಗುತ್ತದೆ ಹಾಗೂ ಹೆಮ್ಮೆಯಾಗುತ್ತದೆ. ಮುಂದಿನ ಭಾನುವಾರ (25/10/2026)ರಂದು ನಡೆಯುವ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ ಉತ್ತಮ ರೀತಿಯಲ್ಲಿ ನಡೆದು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಬಾಲಕೃಷ್ಣರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮ ಯಶಸ್ವಿಯಾಗಲು ಉಪನ್ಯಾಸಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ತಂಡ ಉತ್ತಮ ಕೆಲಸವನ್ನು ಮಾಡಿದೆ. ವಿದ್ಯಾರ್ಥಿಗಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಹಾಗೂ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಮಿನುಗುತಾರೆ ಪ್ರಸನ್ನ ಶೆಟ್ಟಿ ಬೈಲೂರು ಇವರು ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಮುಂದಿನ ಕ್ರೀಡಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಪಾಟ್ಕರ್ ಕ್ರಿಕೆಟ್ ಟ್ರೋಫಿಗಳನ್ನು ಅನಾವರಣಗೊಳಿಸಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾಗಿರುವ ಕೆ.ಎಸ್. ಇಮ್ತಿಯಾಜ್ ಅಹಮ್ಮದ್ ರವರ ನಿರಂತರ ಪ್ರೋತ್ಸಾಹ,
ದೂರದೃಷ್ಟಿತ್ವ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಪ್ರೇರಕ ಎಂದರು.
ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಲೊಲಿಟಾ ಡಿಸಿಲ್ವ ಕ್ರಿಕೆಟ್ ಜೆರ್ಸಿಯನ್ನು ಅನಾವರಣಗೊಳಿಸಿ, ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ವ ತಯಾರಿ ಮಾಡಿ ಆಗಿರುವ ಯಶಸ್ಸು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಾದ ಪ್ರಿನ್ ಸ್ಟನ್, ಅಝ್ಮಿಯಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಅಫ್ಸಿಯಾನ್, ಹಿತೇಶ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಪ್ರತೀಕ್ಷ್ ಮತ್ತು ತಂಡದವರಿAದ ನೃತ್ಯ ಪ್ರದರ್ಶನ ನಡೆಯಿತು.






.
.
.
.
.
.
.
.
.
.
.
.
.
.
.
.
.
.
.
.
