
ವಿಶಾಖಪಟ್ಟಣ,ನ.14: ಅರ್ನಬ್, ಮುರಸು ಚಂಡಮಾರುತದ ಪರಿಣಾಮದಿಂದ ಚೇತರಿಸಿಕೊಳ್ಳುತ್ತಿರುವ ಆಂಧ್ರಪ್ರದೇಶ, ಒಡಿಶಾ ರಾಜ್ಯಗಳಿಗೆ ಮೂರನೇ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಇಲಾಖೆ “ಸ್ಟೈಮೆಟ್’ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಸುಳಿಗಾಳಿಯು ನ.15ರ ವೇಳೆಗೆ ಮತ್ತಷ್ಟು ತೀವ್ರಗೊಂಡು ವಾಯುಭಾರ ಕುಸಿತವಾಗಿ ಬದಲಾಗುವ ಸಾಧ್ಯತೆಯಿದೆ. ಇದರಿಂದ ನ.18ರೊಳಗೆ ಮೂರನೇ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಈ ಚಂಡಮಾರುತಕ್ಕೆ ಅಕ್ವನ್ ಎಂದು ಇರಾನ್ ನಾಮಕರಣ ಮಾಡಿದ್ದು,ಅಕ್ವನ್ ಎಂದರೆ “ಕೆಟ್ಟ ಮನಸ್ಸು’ ಎಂಬರ್ಥವನ್ನು ನೀಡುತ್ತದೆ.
ಈ ಅಕ್ವನ್ ಚಂಡಮಾರುತವು ಭಾರತದ ಕರಾವಳಿಯನ್ನು ತಲುಪುವಷ್ಟರಲ್ಲಿ ತನ್ನ ದಿಕ್ಕನ್ನು ಬದಲಿಸಿಕೊಳ್ಳಬಹುದು ಎಂದು ಹೇಳಿರುವ ಸ್ಟೈಮೆಟ್, ಹೆಚ್ಚಾಗಿ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ನ.15 ಮತ್ತು 17 ರ ನಡುವೆ ಬಂಗಾಳಕೊಲ್ಲಿಯಲ್ಲಿ ಗಾಳಿಯ ವೇಗವು ಗಂಟೆಗೆ 65 ಕಿ.ಮೀ ವರೆಗೆ ಇರಲಿದೆ ಎಂದು ಎಚ್ಚರಿಸಿದೆ.


































.
.
.
.
.
.
.
.
.
.
.
.
.
.
.
.
.
.
.
.
