Share this news

ಕಾರ್ಕಳ, ನ.15: ಯುವ ಸಮುದಾಯವು ಸಂಘಟಿತರಾಗಿ ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನದ ಜೊತೆಗೆ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಾಗ ಸಂಘಟನೆ ಬಲಗೊಳ್ಳುತ್ತದೆ ಜೊತೆಗೆ ಸಂಘಟನೆಯ ಮೂಲಕ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಕ್ರೀಯಾಶೀಲರಾಗಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಮುಂಬಯಿ ಉದ್ಯಮಿ ಸುಧಾಕರ ನಾಯ್ಕ್ ಕುರ್ಪಾಡಿ ಹೇಳಿದರು.

ಅವರು ಅಜೆಕಾರು ರಾಮ ಮಂದಿರದಲ್ಲಿ ನ.15ರಂದು ನಡೆದ ಕಾರ್ಕಳ-ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ,ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಗಳು ಸದೃಢವಾಗಿ ಬೆಳೆದಾಗ ಮಾತ್ರ ಸಮುದಾಯದಲ್ಲಿನ ದುರ್ಬಲರು ಹಾಗೂ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಯುವಶಕ್ತಿ ಸಂಘಟಿರಾಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ನಾಯ್ಕ್ ಭಾಗವಹಿಸಿ ಮಾತನಾಡಿ, ಸಂಘಟಿತ ಸಮಾಜವು ನೂರಾರು ಸಾಧಕರನ್ನು ಹುಟ್ಟು ಹಾಕುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಸ್ಮರಣೀಯವಾಗಿದೆ. ಇಂದಿನ ಮಕ್ಕಳಿಗೆ ನಮ್ಮ ಸಮುದಾಯದ ಸಂಸ್ಕೃತಿ, ಸಂಪ್ರದಾಯ, ಭಾಷೆ ಮತ್ತು ಪರಪರೆಯ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ ನಾಯ್ಕ್ ಮಾತನಾಡಿ, ಮರಾಠಿ ಸಮಾಜವು ಅತ್ಯಂತ ಕಠಿಣ ಪರಿಶ್ರಮದಿಂದ ಬೆಳೆದುಬಂದ ಸಮುದಾಯವಾಗಿದೆ. ಇಂದು ಸಮಾಜದ ಎಲ್ಲಾ ರಂಗಗಳಲ್ಲಿಯೂ ಕೂಡ ನಮ್ಮ ಸಮುದಾಯದ ಸಾಧಕರು ಗಣನೀಯ ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಸಾಧನೆಯ ಹಾದಿಯಲ್ಲಿ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಯಶಸ್ಸು ಸಾಧ್ಯ ಎಂದರು.

ಕಾರ್ಕಳ-ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಂಕರ ನಾಯ್ಕ್ ದುರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮರಾಠಿ ಸಮುದಾಯದ 8 ಮುಂದಿ ಸಾಧಕರಿಗೆ `ಮರಾಠಿ ಸಾಧನಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲದೇ ರಾಷ್ಟçಪತಿಯವರಿಂದ ಪ್ರಶಸ್ತಿ ಪಡೆದ ಕಾರ್ಕಳದ ಮಿಯ್ಯಾರಿನ ಯುವ ವಿಜ್ಞಾನಿ ರತ್ನಾಕರ ನಾಯ್ಕ್ ಅವರಿಗೆ `ಮರಾಠಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೇ ರಾಷ್ಟç ಮಟ್ಟದ ಯೋಗ ತರಬೇತುದಾರ ಹಾಗೂ ಯೋಗಶ್ರೀ ರಾಜ್ಯ ಪ್ರಶಸ್ತಿ ವಿಜೇತ ಶೇಖರ ಕಡ್ತಲ ಹಾಗೂ ಮಂಗಳೂರು ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ನಾಯ್ಕ್ ಅವರನ್ನು ಗುರುತಿಸಿ ಗೌರವಿಸಲಾಯಿತು.

ಇದೇವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗುತ್ತಿಗೆದಾರ ದಿನಕರ ನಾಯ್ಕ್, ಪೊಲೀಸ್ ಸಹಾಯಕ ಉಪನಿರೀಕ್ಷಕ ಶೇಖರ ನಾಯ್ಕ್ ದುರ್ಗ, ಕಾಡುಹೊಳೆ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ ನಾಯ್ಕ್, ಸುಗಂಧಿ ನಾಯ್ಕ್ ಶಿವಪುರ, ಅಶೋಕ್ ನಾಯ್ಕ್ ಕುಕ್ಕುಜೆ, ರೇವತಿ ದುರ್ಗ, ಬಚ್ಚಪ್ಪ ದುರ್ಗಾಪರಮೇಶ್ವರಿ ಮರಾಠಿ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಕೃಷ್ಣಪ್ರಸಾದ್,ಕಾರ್ಕಳ-ಹೆಬ್ರಿ ಮರಾಠಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಹರೀಶ್ ನಾಯ್ಕ್ ಇರ್ವತ್ತೂರು, ರಾಜೇಶ್ ನಾಯ್ಕ್ ಮುನಿಯಾಲು ಉಪಸ್ಥಿತರಿದ್ದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗ ಸ್ವಾಗತಿಸಿದರು. ಅಶೋಕ ನಾಯ್ಕ್ ವಂದಿಸಿದರು. ಪದ್ಮಾಕರ್ ನಾಯ್ಕ್, ರೇವತಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *