
ಬೆಂಗಳೂರು,ನ.17: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 174(2)ರ ಪ್ರಕಾರ ಗಂಭೀರ ಸ್ವರೂಪವಲ್ಲದ ಅಪರಾಧ (ಅಸಂಜ್ಞೆಯ-ಎನ್ಸಿಆರ್) ಕೃತ್ಯದ ಕುರಿತು ತನಿಖೆ ನಡೆಸುವ ಮುನ್ನ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ದೂರನ್ನು ಕೇವಲ ಮ್ಯಾಜಿಸ್ಪ್ರೇಟ್ಗೆ ರವಾನಿಸಿ, ಅದು ತಲುಪಿದ ಬಗ್ಗೆ ಸ್ವೀಕೃತಿ ಪಡೆದುಕೊಳ್ಳುವುದು ಬಿಎನ್ಎಸ್ಎಸ್ ಸೆಕ್ಷನ್ 174(2) ಪಾಲಿಸಿದಂತಾಗುವುದಿಲ ್ಲಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯದೆ ತಮ್ಮ ವಿರುದ್ಧ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಅಖಿಲ್ ಅಚ್ಯುತ್ ಸೇರಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಂಚನೆ ಹಾಗೂ ಅಪ್ರಾಮಾಣಿಕವಾಗಿ ಆಸ್ತಿ ಹಸ್ತಾಂತರಕ್ಕೆ ಪ್ರೇರೇಪಿಸಿದ (ಬಿಎನ್ಎಸ್ ಸೆಕ್ಷನ್ 318(4)) ಆರೋಪದಡಿ ಪೊಲೀಸರು ರಾತ್ರಿ 7.30ಕ್ಕೆ ಎಫ್ಐಆರ್ ದಾಖಲಿಸಿ, 8.05ಕ್ಕೆ ದೂರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ರವಾನಿಸಿದ್ದರು. ಆದರೆ, ತನಿಖೆ ನಡೆಸಲು ನ್ಯಾಯಾಲಯದಿಂದ ಯಾವುದೇ ಆದೇಶ ಬಂದಿರಲಿಲ್ಲ.
ಬಿಎನ್ಎಸ್ಎಸ್ ಸೆಕ್ಷನ್ 174(2)ರ ಅಡಿಯಲ್ಲಿ ಕಾನೂನಿನ ಉದ್ದೇಶ ಮ್ಯಾಜಿಸ್ಟ್ರೇಟ್ಗೆ ಕೇವಲ ಮಾಹಿತಿ ನೀಡುವುದಲ್ಲ, ತನಿಖೆ ನಡೆಸಲು ಅನುಮತಿ ಪಡೆಯುವುದಾಗಿದೆ. ಪೂರ್ವಾನುಮತಿಯಿಲ್ಲದೆ ಅಸಂಜ್ಞೇಯ ಪ್ರಕರಣದ ತನಿಖೆ ನಡೆಸುವಂತಿಲ್ಲ. ನಿಗದಿತ ಕಾನೂನು ಪ್ರಕ್ರಿಯೆ ಅನುಸರಿಸದೆ ದಾಖಲಿಸಿದ ಎಫ್ಐಆರ್ಗೆ ಕಾನೂನಿನ ಸಿಂಧುತ್ವ ಇರುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಒಂದು ವೇಳೆ ಇಂತಹ ಪ್ರಕರಣಗಳ ತನಿಖೆ ಮುಂದುವರಿಸಲು ಅವಕಾಶ ನೀಡಿದರೆ, ಶಾಸನಬದ್ಧ ನಿಯಮಗಳನ್ನು ಪಾಲಿಸುವುದರಿಂದ ಪೊಲೀಸರಿಗೆ ವಿನಾಯಿತಿ ನೀಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಎಫ್ಐಆರ್ ಹಾಗೂ ಅದಕ್ಕೆ ಸಂಬAಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆದರೂ ಪೊಲೀಸರು ಸಂಬAಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿ ತನಿಖೆಗೆ ಅನುಮತಿ ಕೋರಲು ಮತ್ತು ಕೋರ್ಟ್ ಅನುಮತಿ ನೀಡಿದರೆ ಕಾನೂನು ಪ್ರಕಾರ ಮುಂದುವರಿಯಲು ಸ್ವತಂತ್ರರಿರುತ್ತಾರೆ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
