
ಕಾರ್ಕಳ,ನ.17: ರಾಧಾ ನಾಯಕ್ ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಇಲ್ಲಿನ ವಿದ್ಯಾರ್ಥಿ ಪೋಷಕರಿಂದ ಶಾಲಾ ಆವರಣದಲ್ಲಿ ನ. 15 ರವಿವಾರ ಒಂದು ದಿನದ ಶ್ರಮದಾನ ನಡೆಸಿದರು. ಶಾಲೆಯ ಸುತ್ತಮುತ್ತ ಮಳೆಗಾಲದ ಅವಧಿಯಲ್ಲಿ ಬೆಳೆದ ಗಿಡ ಬಳ್ಳಿಗಳನ್ನು ಸ್ವಚ್ಛಗೊಳಿಸಿ ಶಾಲಾ ಕಟ್ಟಡದ ಹೊರಾಂಗಣವನ್ನು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ವಿದ್ಯಾರ್ಥಿ ಪೋಷಕರು ಸ್ಚಚ್ಛಗೊಳಿಸಿದರು.
ಶಾಲಾ ಕೈತೋಟ ಸ್ವಚ್ಛತೆ, ಆಟದ ಮೈದಾನ ಸಿದ್ಧತೆ, ತೆರೆದ ಬಾವಿಯ ಸುತ್ತಮುತ್ತ ನಡೆದ ಸ್ವಚ್ಛತೆ ಮುಂತಾದ ಕಾರ್ಯದಲ್ಲಿ ಭಾಗವಹಿಸಿದ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಳೆವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಕುಲಾಲ್ ಮತ್ತು ಮುಖ್ಯ ಶಿಕ್ಷಕ ರಾಮದಾಸ ನಾಯಕ್ ಅವರು ಅಭಿನಂದಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
