

ಬೆಂಗಳೂರು,ನ.19: ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅದೇ ವೇಳೆ, ಡಿಸೆಂಬರ್ 31, 2015ರ ಕಟ್-ಆಫ್ ದಿನಾಂಕವನ್ನು ಹೈಕೋರ್ಟ್ ರದ್ದುಗೊಳಿಸಿದೆ
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಪೂರ್ವಾನುಮತಿ ಇಲ್ಲದೆ ನೇರವಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತಿಲ್ಲ. ನಿವೃತ್ತಿ, ಮರಣ ಸೇರಿದಂತೆ ವಿವಿಧ ಕಾರಣಗಳಿಂದ ತೆರವಾದ ಹುದ್ದೆಗಳಿಗೆ ನಿಗದಿತ ನಿಯಮಗಳ ಪ್ರಕಾರ ಅನುಮತಿ ಪಡೆಯಬೇಕು. 2015ರ ಡಿಸೆಂಬರ್ 31ರ ನಂತರ ತೆರವಾದ ಹುದ್ದೆಗಳನ್ನು ಭರ್ತಿ ಮಾಡದಂತೆ ಇದ್ದ ನಿರ್ಬಂಧ/ಕಟ್-ಆಫ್ ದಿನಾಂಕವನ್ನು ನ್ಯಾಯಾಲಯ ತೆಗೆದುಹಾಕಿದೆ. ಕೋವಿಡ್-19 ಅವಧಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧವು ಶಾಶ್ವತ ನಿಷೇಧವಲ್ಲ ಎಂದೂ ತಿಳಿಸಿದೆ. ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತಮ್ಮ ಹುದ್ದೆಗಳ ಭರ್ತಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಮಂಜೂರಾದ ಹುದ್ದೆಗಳ ಸಂಖ್ಯೆ, ವಿದ್ಯಾರ್ಥಿಗಳ ಸಂಖ್ಯೆ, ಬೋಧಕ ಸಿಬ್ಬಂದಿ ಕೊರತೆ, ಮೀಸಲಾತಿ ರೋಸ್ಟರ್ ಮತ್ತು ಆರ್ಥಿಕ ಪರಿಣಾಮಗಳನ್ನು ಆಧರಿಸಿ ಸಂಬAಧಪಟ್ಟ ಪ್ರಾಧಿಕಾರ ಅರ್ಜಿಗಳನ್ನು ಪರಿಶೀಲಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಈ ನಿರ್ದೇಶನಗಳು ಯಾವುದೇ ಸಂಸ್ಥೆಗೆ ಖಾಲಿ ಹುದ್ದೆಯನ್ನು ಭರ್ತಿ ಮಾಡುವ ಅಥವಾ ಅಂತಹ ಹುದ್ದೆಗೆ ನೇಮಕಾತಿ ನಡೆಸಿದಾಗ ಅದಕ್ಕಾಗಿ ಅನುದಾನವನ್ನು (grant-in-aid) ಪಡೆಯುವ ಸ್ವಯಂಚಾಲಿತ ಹಕ್ಕನ್ನು ನೀಡುವುದಿಲ್ಲ. ಪೂರ್ವಾನುಮತಿ ಪಡೆಯುವುದು ಮತ್ತು ನಿಗದಿತ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಸುವುದು ಕಡ್ಡಾಯವಾಗಿ ಮುಂದುವರಿಯುತ್ತದೆ. ಅನುದಾನಕ್ಕೆ ಸಂಬಂಧಿಸಿದ ಸೂಕ್ತ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯವಿರುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
