Share this news

ಕಾರ್ಕಳ, ನ.20: ಸಹೋದರರ ನಡುವಿನ ವೈಯುಕ್ತಿಕ ದ್ವೇಷದ ಪರಿಣಾಮವಾಗಿ ಅಣ್ಣನ ಮಗನಿಗೆ ಚಿಕ್ಕಪ್ಪ ಹಾಗೂ ಆತನ ಮಕ್ಕಳು ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಕಾರ್ಕಳ ತಾಲೂಕಿನ ದುರ್ಗ ಗ್ರಾಮದ ತೆಳ್ಳಾರು ಎಂಬಲ್ಲಿ ನಡೆದಿದೆ.

ದುರ್ಗ ಗ್ರಾಮದ ತೆಳ್ಳಾರು ಕುಕ್ಕುಜೆ ನಿವಾಸಿ ನಝೀರ್ ಶೇಖ್ ಎಂಬವರ ಪುತ್ರ ಇರ್ಷಾದ್ ಶೇಖ್ (21) ಎಂಬ ಯುವಕ ಆತನ ಚಿಕ್ಕಪ್ಪ ಹಾಗೂ ಆತನ ಮಕ್ಕಳಿಂದ ಹಲ್ಲೆಗೊಳಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇರ್ಷಾದ್ ಶೇಖ್ ನ.19 ರಂದು ಸಂಜೆ 3 ಗಂಟೆ ಸುಮಾರಿಗೆ ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಮೇಲಿನ ಕುಕ್ಕುಜೆ ಹಾಡಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ಆತನ ಚಿಕ್ಕಪ್ಪನ ಮಗ ರಿಮಾನ್ ನಿಂತುಕೊAಡಿದ್ದು ಆತನ ತಂದೆ ರಿಯಾಜ್‌ಗೆ ಪೋನ್ ಮಾಡಿ ಇರ್ಷಾದ್ ಶೇಖ್ ನಡೆದುಕೊಂಡು ಹೋಗುವ ವಿಚಾರವನ್ನು ತಿಳಿಸಿದ್ದ. ಅದೇ ಸಮಯಕ್ಕೆ ಸ್ಕೂಟರ್‌ನಲ್ಲಿ ರಿಯಾಜ್ ಮತ್ತು ರಿಫಾನ್ ಮತ್ತು ರಿಹಾನ್ ಕೂಡಾ ಬಂದಿದ್ದು, ರಿಯಾಜ್ ಇರ್ಷಾದ್ ಶೇಖ್ ನನ್ನು ತಡೆದು ನಿಲ್ಲಿಸಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೈಯಿಂದ ದೂಡಿ ಕೆಳಗೆ ಬೀಳಿಸಿದ್ದಾನೆ. ಅದೇ ವೇಳೆ ರಿಹಾನ್ ಮತ್ತು ರಿಮಾನ್ ಕಾಲಿನಿಂದ ಬೆನ್ನಿಗೆ, ಎದೆಗೆ ತುಳಿದು ಎಳೆದಾಡಿ ನಂತರ ನಾಲ್ಕು ಜನ ಸೇರಿ ಕೈಯಿಂದ ಹೊಡೆದಿದ್ದು, ರಿಹಾನ್ ತಂದಿದ್ದ ಕಬ್ಬಿಣದ ಮಂಡೆ ಕತ್ತಿಯಲ್ಲಿ ಬೀಸಿದಾಗ ತಪ್ಪಿಸಿಕೊಂಡಿದ್ದು, ಅದೇ ಕತ್ತಿಯನ್ನು ರಿಯಾಜ್ ನು ರಿಹಾನ್ ನಿಂದ ಕಸಿದುಕೊಂಡು ಕತ್ತಿಯ ಹಿಡಿಯಿಂದ ಇರ್ಷಾದ್ ಶೇಖ್ ತಲೆಯ ಕೆಳ ಭಾಗಕ್ಕೆ ಗುದ್ದಿದ್ದಾರೆ.

ಆಗ ಇರ್ಷಾದ್ ಶೇಖ್ ಬೊಬ್ಬೆ ಹಾಕಿದ್ದು, ಚಿಕ್ಕಪ್ಪ ಜಾಹಿರ್, ಅಮ್ಮ ಶಬಾನಾ ಬಾನು ಮತ್ತು ನೆರೆಮನೆಯ ವಾಸಿ ಬಿಲಾಲ್ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅವರನ್ನು ನೋಡಿ ರಿಯಾಜ್ ಮತ್ತು ಆತನ ಮಕ್ಕಳಾದ ರಿಫಾನ್, ರಿಹಾನ್ , ರಿಮಾನ್ ರವರುಗಳು ಅಲ್ಲಿಂದ ಓಡಿ ಹೋಗಿದ್ದು, ಇರ್ಷಾದ್ ಶೇಖ್ ನನ್ನು ಅವರ ತಾಯಿ, ಚಿಕ್ಕಪ್ಪ ಮತ್ತು ನೆರೆಮನೆಯ ಬಿಲಾಲ್ ರವರು ಉಪಚರಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *