ಹೆಬ್ರಿ : ಹೆಬ್ರಿ ಸಮೀಪದ ಕುಚ್ಚೂರು ಎಂಬಲ್ಲಿ ಮನೆಯ ಕಟ್ಟಿಗೆ ಕೊಟ್ಟಿಗೆಯೊಂದರಲ್ಲಿ ಅಡಗಿ ಕುಳಿತ್ತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಅಜಯ್ ಗಿರಿ ಸೆರೆ ಹಿಡಿದಿದ್ದಾರೆ.
ಕುಚ್ಚೂರಿನ ನಾಗೇಶ್ ಎಂಬವರ ಮನೆಯಲ್ಲಿ ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಟ್ಟಿಗೆಯ ರಾಶಿಯ ಅಡಿಯಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪವನ್ನು ಉರಗ ಸಂಶೋಧಕರಾದ ಅಜಯ್ ಗಿರಿ ಅವರು ಸೆರೆ ಹಿಡಿದು ಕುದುರೆಮುಖ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಮಳೆಗಾಲದ ಆರಂಭದಲ್ಲಿ ಕಾಡಿನಿಂದ ಆಹಾರ ಅರಸಿ ನಾಡಿಗೆ ಬರುವ ಹಾವುಗಳು ಕಾಡಂಚಿನ ಮನೆಗಳ ಸುತ್ತಮುತ್ತ ಸುಳಿದಾಡುವುದು ಸರ್ವೇಸಾಮಾನ್ಯ.