ಕಾರ್ಕಳ: ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಳ್ಳಾರು ಮಾದಬೆಟ್ಟು ಎಂಬಲ್ಲಿನ ಕಿರುಸೇತುವೆಯಿಂದ ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ತೆಳ್ಳಾರು ನಿವಾಸಿ ಸತೀಶ್ ಶೆಟ್ಟಿ(51) ಎಂಬವರು ಬುಧವಾರ ತಡರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಆಯತಪ್ಪಿ ಕಿರುಸೇತುವೆಯಿಂದ ಬಿದ್ದ ಪರಿಣಾಮ ತಲೆಗೆ ಕಲ್ಲು ಬಡಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿವೇಳೆ ಹಲವು ಬಾರಿ ಅವರ ಮೊಬೈಲ್ ಗೆ ಕರೆ ಮಾಡಿದರೂ ಸ್ವೀಕರಿಸದ ಹಿನ್ನಲೆಯಲ್ಲಿ ಗುರುವಾರ ಬೆಳಗ್ಗೆ ಮನೆಯವರು ಹುಡುಕಾಡಿದಾಗ ಸತೀಶ್ ಶೆಟ್ಟಿ ಮೃತದೇಹ ಕಿರುಸೇತುವೆ ಬಳಿ ಪತ್ತೆಯಾಗಿದೆ. ಸೇತುವೆಯ ಕಟ್ಟೆಯಲ್ಲಿ ಕುಳಿತವರು ಹಿಮ್ಮುಖವಾಗಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ