Share this news

ಕಾರ್ಕಳ: ಕಾರ್ಕಳ ತಾಲೂಕು ನೀರೆ ಬೈಲೂರು ಮೂಲದ ಮುಂಬೈ ಉದ್ಯಮಿ ಶಿಶುಪಾಲ ಶೆಟ್ಟಿ ಮತ್ತು ಶ್ವೇತಾ ಶೆಟ್ಟಿಯವರ ಪುತ್ರ ಕೆಎಂಇಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸನ್ವಿತ್ ಶೆಟ್ಟಿ ಹೈದರಾಬಾದಿನಲ್ಲಿ ನಡೆದ ಫಸ್ಟ್ ಏಷಿಯನ್ ಓಪನ್ ಅಂತರಾಷ್ಟ್ರೀಯ “ಟೆಕ್ವಾಂಡೋ” ಚಾಂಪಿಯನ್‌ಶಿಪ್ ನಲ್ಲಿ ರನ್ನರ್ ಆಫ್ ವೈಯಕ್ತಿಕ ಚಾಂಪಿಯನ್ ಶಿಪ್ ಬೆಳ್ಳಿಯ ಪದಕವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ಕೆ.ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸನ್ವಿತ್ ಶೆಟ್ಟಿ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಒಂದು ಬೆಳ್ಳಿ, ಒಂದು ಕಂಚು ಪದಕವನ್ನು, ಶೃಂಗೇರಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು, ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.

ಟೆಕ್ವಾಂಡೋ ಚಾಂಪಿಯನ್ ಸನ್ವಿತ್ ಶೆಟ್ಟಿಯವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಎಸ್ ಇಮ್ಮಿಯಾಜ್ ಅಹಮ್ಮದ್, ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ರಾವ್, ದೈಹಿಕ ಶಿಕ್ಷಕರಾದ ಸತೀಶ್ಚಂದ್ರ ಹೆಗ್ಡೆ, ಉಪನ್ಯಾಸಕರು, ಅಧ್ಯಾಪಕ ವೃಂದದವರು ಹಾಗೂ ಕೋಚ್ ಸುರೇಶ್ ದೇವಾಡಿಗ ಅಭಿನಂದಿಸಿರುತ್ತಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *