
ಕಾಬೂಲ್: ಪಾಕಿಸ್ತಾನ ಹಾಗೂ ತಾಲಿಬಾನ್ ಆಡಳಿತದ ಅಪಘಾನಿಸ್ತಾನ ನಡುವೆ ಸಂಘರ್ಷ ಮುಂದುವರಿದ್ದಿದ್ದು, ಪಾಕ್ ಸೇನಾ ನೆಲೆಗಳ ಮೇಲೆ ಶುಕ್ರವಾರ ಅಪಘಾನಿಸ್ತಾನವು ವಾಯುದಾಳಿ ನಡೆಸಿದೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ, ಅಫ್ಘಾನ್ ವಾಯುಪಡೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿಯ ಫೈಸಲಾಬಾದ್ ನಗರದ ಬಳಿಯ ಮಿಲಿಟರಿ ಶಿಬಿರವನ್ನ ಗುರಿಯಾಗಿಸಿಕೊಂಡಿತು. ಜಮ್ರುದ್’ನಲ್ಲಿರುವ ಮಿಲಿಟರಿ ವಸಾಹತು, ನೌಶೇರಾದ ಸೇನಾ ಕಂಟೋನ್ಮೆAಟ್ ಮತ್ತು ಅಬೋಟಾಬಾದ್’ನಲ್ಲಿಯೂ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲಾಯಿತು.
ಪಾಕಿಸ್ತಾನದ ಪ್ರಮುಖ ಮಿಲಿಟರಿ ನೆಲೆಗಳು, ಸೌಲಭ್ಯಗಳು ಮತ್ತು ಮಿಲಿಟರಿ ನೆಲೆಗಳನ್ನ ಗುರಿಯಾಗಿರಿಸಿಕೊಂಡಿವೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಗುರುವಾರ ರಾತ್ರಿ ಕಾಬೂಲ್, ಕಂದಹಾರ್ ಮತ್ತು ಪಕ್ತಿಕಾದ ಅಫ್ಘಾನ್ ನಗರಗಳ ಮೇಲೆ ಪಾಕಿಸ್ತಾನದ ವಾಯು ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದಿವೆ ಎಂದು ಸಚಿವಾಲಯ ಹೇಳಿದೆ. ಆದಾಗ್ಯೂ, ಈ ದಾಳಿಗಳಿಂದ ಉಂಟಾದ ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ.


.
.
.
.
.
.
.
.
.
.
