ಅಜೆಕಾರು: ಕಾಮಾಲೆ ರೋಗ ಮತ್ತು ನರರೋಗದಿಂದ ಬಳಲುತ್ತಿದ್ದ ಅಜೆಕಾರಿನ ವ್ಯಕ್ತಿಯೊಬ್ಬರು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸಾದ ಬಳಿಕ ಮೃತಪಟ್ಟಿದ್ದಾರೆ.
ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ(44ವ) ಮೃತಪಟ್ಟ ದುರ್ದೈವಿ. ಬಾಲಕೃಷ್ಣ ರವರಿಗೆ 25 ದಿನಗಳ ಹಿಂದೆ ಜ್ವರ ಮತ್ತು ವಾಂತಿ ಶುರುವಾಗಿದ್ದು ಚಿಕಿತ್ಸೆಗಾಗಿ ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರನ್ನು ಪರಿಕ್ಷಿಸಿದ ವೈದ್ಯರು ಆತನಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿ 06 ದಿನ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ನಂತರ ಬಾಲಕೃಷ್ಣ ಅವರಿಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಣಿಪಾಲ ಕೆ ಎಂ ಸಿ ಆಸ್ಪತ್ರೆ ವೈದ್ಯರು ಹಾಗೂ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ವೈದ್ಯರು ಪರಿಕ್ಷಿಸಿ ಬಾಲಕೃಷ್ಣ ರವರಿಗೆ ನರ ರೋಗದ ಸಮಸ್ಯ ಇದೆ ಎಂದು ತಿಳಿಸಿ , ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದರು. ಅದರಂತೆ ಬಾಲಕೃಷ್ಣ ಅವರಿಗೆ ನಿಮಾನ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಅಲ್ಲಿಯೂ ಗುಣ ಮುಖರಾಗದ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ 1 ವಾರ ಕಾಲ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ಬಾಲಕೃಷ್ಣ ರವರನ್ನು ಉದ್ಯಾವರ ಅಥವಾ ಅಂಕೋಲಾ ಆಯರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದರು. ಅದರಂತೆ ಅ.19 ಶನಿವಾರದಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಬಾಲಕೃಷ್ಣ ರವರನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ರಾತ್ರಿ 10 ಗಂಟೆಯ ವೇಳೆಗೆ ದೆಪ್ಪುತ್ತೆ ಅಜೆಕಾರಿನ ಮನೆಗೆ ಕರೆದುಕೊಂಡು ಬರಲಾಗಿತ್ತು.
ಆದರೆ ಇಂದು (ಅ.20) ಮುಂಜಾನೆ 3:30 ರ ವೇಳೆಗೆ ಬಾಲಕೃಷ್ಣ ಅವರ ಪತ್ನಿ ಮನೆಯಲ್ಲಿ ಬೊಬ್ಬೆ ಹಾಕುವುದನ್ನು ಕೇಳಿ ಮನೆಗೆ ಹೋಗಿ ನೋಡಿದಾಗ ಅವರು ಉಸಿರಾಟವಿಲ್ಲದೆ ಮಲಗಿದ್ದರು. ಬಳಿಕ 8.30 ರ ವೇಳೆಗೆ ವೈದ್ಯರು ಬಂದು ಪರೀಕ್ಷಿಸಿ ಬಾಲಕೃಷ್ಣ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.