
ಕಾರ್ಕಳ, ಜ. 03:ಅಜೆಕಾರು ಪದ್ಮನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಬಳಿ ನೇಮೊಟ್ಟು ದಿ.ಸಂಪಾವತಿ ಶೆಡ್ತಿಯವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಜೆಕಾರು ಶ್ರೀ ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ಜ.02 ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡವರಿಗೆ ಯಾವತ್ತೂ ಶ್ರೇಯಸ್ಸು ಉಂಟಾಗುತ್ತದೆ, ಆ ನಿಟ್ಟಿನಲ್ಲಿ ತಾಯಿಯ ಸವಿನೆನಪಿಗಾಗಿ ಅವರ ಪತಿ ಮತ್ತು ಮಕ್ಕಳು ಮಾಡಿರುವ ಈ ಕಾರ್ಯ ಒಂದು ಮಾದರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಜೆಕಾರು ಪ್ರಗತಿ ಗಣೇಶ್ ಟ್ರೇಡ್ ಸೆಂಟರ್ ಮಾಲೀಕ ಸುಜಯ್ ಶೆಟ್ಟಿ, ನಂದಕುಮಾರ್ ಹೆಗ್ಡೆ ,ಸಂಪಾವತಿ ಶೆಡ್ತಿ ಕುಟುಂಬಿಕರು, ಅಜೆಕಾರು ಭಾಗದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

.
.
