ಹೆಬ್ರಿ : ಅಜೆಕಾರು ವಲಯ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಪ್ರತಿ ವರ್ಷದಂತೆ, ಕಾರ್ತಿಕ ಮಾಸದ ಸಂಕೀರ್ತನೆ, ಭಜನೆ, ಶೋಭಾನೆ, ಅಷ್ಟಾವಧಾನ ಕಾರ್ಯಕ್ರಮವು, ಅಜೆಕಾರು ಗುಡ್ಡೆಅಂಗಡಿ ಹರಿವಾಯು ಕೃಪಾದಲ್ಲಿ ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ದೀಪಾವಳಿ ಹಬ್ಬದ ನಂತರ ಕಾರ್ತಿಕ ಮಾಸದಲ್ಲಿ ಪ್ರತೀ ದಿನ ತುಳಸೀ ದೇವಿಗೆ ಭಕ್ತಿಯಿಂದ ನಡೆಯುವ ವಿಶೇಷ ಸೇವೆಯೆ ಸಂಕೀರ್ತನೆ ಸೇವೆ. ತುಳಸಿ ಸಂಕೀರ್ತನೆ ಒಂದು ವಿಶಿಷ್ಟ ಕಲೆ ಮತ್ತು ಅದರದ್ದೇ ಆದ ಮಹತ್ವ ಕೂಡಾ ಇದೆ. ತಾಳಬದ್ಧವಾದ ಕುಣಿತ ಹಾಗೂ ಹಾಡುಗಾರಿಕೆಯ ಸಮ್ಮಿಲನವೇ ತುಳಸಿ ಸಂಕೀರ್ತನೆಯಾಗಿದೆ.
ಅಜೆಕಾರು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ ಪುತ್ರಾಯ, ಕಾರ್ಯದರ್ಶಿ ಪವನ್ ಕುಮಾರ್ ಮತ್ತು ಸದಸ್ಯರು, ಮಹಿಳೆಯರು ಉಪಸ್ಥಿತರಿದ್ದರು.