ಕಾರ್ಕಳ : ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಭಾರತಿ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಕಾರ್ಕಳದ ಬಿ. ಆರ್. ಸಿ ಯಲ್ಲಿ ಜರುಗಿತು.
ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಗುರುಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ರಮಿತಾ ಶೈಲೇಂದ್ರ, ಕಾರ್ಕಳ ಟೈಗರ್ಸ್ ನ ಸದಸ್ಯ ಪ್ರದೀಪ್ ಶೃಂಗಾರ,ಶ್ರೀನಾಥ್ ಆಚಾರ್ಯ , ಪ್ರವೀಣ್ ಕುಲಾಲ್, ಅರುಣ್ ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ಸಂತೋಷ್ ನಿರೂಪಿಸಿದರು.