
ಅಮರಾವತಿ,ಮಾ.26: ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ಕರ್ನಾಟಕ ಸೇರಿ ಹಲವು ರಾಜ್ಯಗಳ 12 ಜನರನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ವಿಜಯವಾಡದಲ್ಲಿ ಮಂಗಳವಾರ ಮೂವರನ್ನು ಬಂಧಿಸಲಾಗಿದ್ದು, ಅವರ ಮಾಹಿತಿಯಾಧರಿಸಿ ಇನ್ನುಳಿದವರನ್ನು ಬಂಧಿಸಲಾಗಿದೆ. ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ, ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸುತ್ತಿದ್ದ ಆರೋಪದಡಿ ವಿಜಯವಾಡದ ಮೊಹಮ್ಮದ್ ರೆಹ್ಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಹಾಗೂ ಮೊಹಮ್ಮದ್ ಡ್ಯಾನಿಷ್ ಎಂಬವರನ್ನು ಅಂತಾರಾಷ್ಟ್ರೀಯ ಬೆದರಿಕೆಗಳನ್ನು ತಡೆಗಟ್ಟುವ ಸಂಸ್ಥೆಯ (ಸಿಐ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದರು.
“ಅಲ್ ಮಲಿಕ್ ಇಸ್ಲಾಮಿಕ್ ಯೂತ್’ ಹೆಸರಿನ ತಂಡ ರಚಿಸಿದ್ದ ಆರೋಪಿಗಳು ಜೆಹಾದ್‌ಗೆ ಯುವಕರ ಸಿದ್ದಪಡಿಸುವ ಉದ್ದೇಶ ಹೊಂದಿದ್ದು, ಐಸಿಸ್, ಅಲ್‌ಕಾಯಿದಾ ಜತೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಕರ್ನಾಟಕ, ಬಿಹಾರ, ದಿಲ್ಲಿ, ಮಹಾರಾಷ್ಟ್ರ, ಪ.ಬಂಗಾಳ, ತೆಲಂಗಾಣ, ರಾಜಸ್ಥಾನಗಳಲ್ಲಿ ವಿಶೇಷ ತಂಡಗಳು ಶೋಧ ನಡೆಸಿ 9 ಮಂದಿಯನ್ನು ಬಂಧಿಸಿದ್ದಾರೆ.















.
.
.
.
.
.
.
.
.
.
