ಬೆಂಗಳೂರು : ನಾವು ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತೇವೆ. ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚಿನ ಬಜೆಟ್ ಗಳನ್ನು ಕೊಟ್ಟಿರುವ ಮಾನ್ಯ ಮುಖ್ಯಮಂತ್ರಿಗಳು ಹಣಕಾಸು ವಿಚಾರದಲ್ಲಿ ಪರಿಣಿತರಿದ್ದು, ಆರ್ಥಿಕ ಇಲಾಖೆಯನ್ನು ಬಹಳ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ಮೂಲದ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪೆನಿಗೆ ಕೇಂದ್ರ ಸರ್ಕಾರದಿಂದ ಶೇ. 50, ಗುಜರಾತ್ ಸರ್ಕಾರದಿಂದ ಶೇ. 20 ಪ್ರೋತ್ಸಾಹ ಧನ ನೀಡುತ್ತಿದ್ದು, ಕಂಪೆನಿ ಶೇ. 30ರಷ್ಟು ಮಾತ್ರ ಹೂಡಿಕೆ ಮಾಡಲಿದೆ. ನಮ್ಮ ರಾಜ್ಯದವರೇ ಆದ ಶ್ರೀ ಕುಮಾರ ಸ್ವಾಮಿಯವರು ಕೇಂದ್ರ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದು, ಅವರನ್ನು ಭೇಟಿ ಮಾಡಿ, ನಮ್ಮಲ್ಲಿನ ಸೆಮಿಕಂಡಕ್ಟರ್ ಕಂಪೆನಿಗಳಿಗೂ ಗುಜರಾತ್ ರೀತಿಯಲ್ಲೇ ಉತ್ತೇಜನ ನೀಡುವಂತೆ ಒತ್ತಾಯಿಸಿದ್ದಾರೆ.