ಕಾರ್ಕಳ: ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ ರೂ. 147 ಕೋಟಿ ವ್ಯವಹಾರ ನಡೆಸಿ ರೂ. 55.46 ಲಕ್ಷ ನಿವ್ವಳ ಲಾಭಗಳಿಸಿದೆ. ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.30.55 ಲಕ್ಷ ಪಾಲು ಬಂಡವಾಳ ಇದ್ದು ರೂ. 29.57ಕೋಟಿ ಠೇವಣಿ ಸಂಗ್ರಹವಾಗಿದ್ದು ರೂ. 25.57 ಕೋಟಿ ಸಾಲ ವಿತರಿಸಿದ್ದು ರೂ. 34.63 ಕೋಟಿ ದುಡಿಮೆ ಬಂಡವಾಳ ಹೊಂದಿರುತ್ತದೆ ಎಂದು ಜೋಡುರಸ್ತೆ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ರಾವ್ ಹೇಳಿದರು.
ಅವರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದ 2023-2024ನೇ ಸಾಲಿನಲ್ಲಿ ಸಂಘದ ಪ್ರಗತಿಯನ್ನು ಹಾಗೂ ಸಂಘವು ಆರ್ಥಿಕ ಸಾಲಿನಲ್ಲಿ ನಡೆಸಿದ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಅರುಣ್ ಕುಮಾರ್ ಎಸ್ ವಿ ಇವರನ್ನು ಸಂಘದ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಿರುವುದನ್ನು ಸಭೆಯಲ್ಲಿ ಘೋಷಿಸಿದರು. ಸಂಘವನ್ನು ಅಭಿವೃದ್ಧಿಯತ್ತ ಸಾಗುವಲ್ಲಿ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಹನಿದೈನಿಕ ಸಂಗಾಕರಿಗೆ, ಗ್ರಾಹಕ ಮಿತ್ರರಿಗೆ ಹಾಗೂ ಸಂಘದ ಸದಸ್ಯರಿಗೆ ಇಲಾಖಾಧಿಕಾರಿಯವರಿಗೆ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಅರುಣ್ ಕುಮಾರ್ ಎಸ್ ವಿ ಇವರು ಮಾತನಾಡಿ, ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಲ ವಸೂಲಾತಿಯು ಉತ್ತಮ ರೀತಿಯಲ್ಲಿದ್ದು ಸಿಬ್ಬಂದಿಗಳ ದಕ್ಷ ಪ್ರಾಮಾಣಿಕ ದುಡಿಮೆಯಿಂದ ಸಂಘವು ಅಭಿವೃದ್ದಿಯು ಹೊಂದುತ್ತದೆ ಎಂದರು.
ಸAಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ 2024-2025ನೇ ಸಾಲಿನ ಬಜೆಟ್ ಮಂಡಿಸಿದರು. ಸಂದೀಪ್ ನಾಯಕ್ ಇವರು ಮಹಾಸಭೆಯ ನೋಟೀಸನ್ನು ಓದಿ ದಾಖಲಿಸಿದರು. ದಿನೇಶ್ ಕುಮಾರ್ ವೈ ಇವರು 2023-24ನೇ ಸಾಲಿನ ಬಜೆಟಿಗಿಂತ ಜಾಸ್ತಿ ಖರ್ಚಾಗಿರುವದನ್ನು ಓದಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನಲ್ಲಿ ಅಧಿಕ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕರ ನೀಡಲಾಯಿತು. ಹಾಗೂ ಉತ್ತಮ ಕಾರ್ಯನಿರ್ವಯಿಸಿದ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ವೃಷಭರಾಜ್ ಕಡಂಬ, ನಿರ್ದೇಶಕರಾದ ಸಂದೀಪ್ ನಾಯಕ್, ತ್ರಿವಿಕ್ರಮ ಕಿಣಿ, ದಿನೇಶ್ ಕುಮಾರ್ ವೈ, ಯೋಗಿಶ್ ಸಾಲ್ಯಾನ್, ಪಾಂಡುರAಗ ನಾಯಕ್, ಗಣೇಶ್, ಸಂಜೀವ ನಾಯ್ಕ್, ಶ್ರೀಮತಿ ಸುಶ್ಮೀತಾ, ಶ್ರೀಮತಿ ದೀಪಾ ಎಸ್ ವಾಗ್ಳೆ, ಪುಷ್ಪರಾಜ್ ಎಸ್ ಶೆಟ್ಟಿ, ಅನಿಲ್ ಕುಮಾರ್ ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು.
ಶ್ರೀಮತಿ ದೀಪಾ ಎಸ್ ವಾಗ್ಳೆ ಪ್ರಾರ್ಥಿಸಿದರು. ಯೋಗಿಶ್ ಸಾಲಿಯಾನ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ವೃಷಭರಾಜ್ ಕಡಂಬ ಧನ್ಯವಾದವಿತ್ತರು. ಶ್ರೀಮತಿ ಪ್ರತಿಭಾ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.







in 
