ನವದೆಹಲಿ: ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿರುವ ನಮ್ಮ ಹೆಮ್ಮೆಯ ಶುಭಾಂಶು ಶುಕ್ಲಾ ಅವರು ಅಮೆರಿಕ, ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳೊಂದಿಗೆ ಇಂದು ಬೆಳಗ್ಗೆ ಅಮೆರಿಕಾದ ಫ್ಲೋರಿಡಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿAದ :ಸ್ಪೇಸ್ ಎಕ್ಸ್ -ಫಾಲ್ಕನ್ 9 ಕ್ರೂಜ್ ನಲ್ಲಿ ಯಶಸ್ವೀಯಾಗಿ ನಭಕ್ಕೆ ಹಾರಿದ್ದಾರೆ.
ಅಮೆರಿಕ, ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳೊಂದಿಗೆ ಎಎಕ್ಸ್ -4 ಮಿಷನ್ ನಲ್ಲಿ 14 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ.
ಈ ಮಿಷನ್ ಆಕ್ಸಿಯೋಮ್ ಸ್ಪೇಸ್ ಎಂಬ ಖಾಸಗಿ ಏರೋಸ್ಪೇಸ್ ಕಂಪನಿಯ ಭಾಗವಾಗಿದ್ದು, ಇದು ಬಾಹ್ಯಾಕಾಶವನ್ನು ಪ್ರವೇಶಿಸಲು ಮತ್ತು ಅಗ್ಗವಾಗಿಸಲು ಯೋಜಿಸಿದೆ ಮತ್ತು ಅಂತಿಮವಾಗಿ ಹಳೆಯ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಬದಲಾಯಿಸುವ ಖಾಸಗಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸಿದೆ.
ಶುಭಾಂಶು ಶುಕ್ಲಾ ಅವರು ದೇಶಾದ್ಯಂತದ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ವಿನ್ಯಾಸಗೊಳಿಸಿದ ಏಳು ಭಾರತೀಯ ವಿಜ್ಞಾನ ಅಧ್ಯಯನಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಶುಭಾಂಶು ಶುಕ್ಲಾ ಇವರ ಸಾಧನೆ ಕೋಟ್ಯಾಂತರ ಭಾರತೀಯರಿಗೆ ಹೆಮ್ಮೆಯಾಗಿದೆ.