ಬೆಂಗಳೂರು: ಕಾಂಗ್ರೆಸ್ ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಿ,ಪಟ್ಟಿ ಬಿಡುಗಡೆ ಮಾಡಿದ್ದು, ಇಂದು ಆಯಾ ಇಲಾಖೆಗಳ ಮೂಲಕ ನಿಯೋಜಿತ ಅಧ್ಯಕ್ಷರುಗಳಿಗೆ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.
44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.
ಜ.26 ರಂದೇ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆಗಲೇ 34 ಮಂದಿ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ರವಾನಿಸಿತ್ತು. ಈವರೆಗೆ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೇಮಕ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ 34 ಕಾರ್ಯಕರ್ತರ ಜತೆಗೆ ಹೆಚ್ಚು ವರಿ 10 ಮಂದಿ ಸೇರಿಸಿ 44 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ನಿಗಮ ಮಂಡಳಿಗಳ ಅಧ್ಯಕ್ಷ,ಉಪಾಧ್ಯಕ್ಷರ ಪಟ್ಟಿ ಇಂತಿದೆ.
1 ವಿನೋದ್ ಅಸೂಟಿ-ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ 2 ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, 3 ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ. 4 ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ, 5 ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ, 6 ಆಂಜನೇಯಲು, ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, 7 ಮರಿಗೌಡ, ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ , 8 ಆರ್.ಎಂ.ಮಂಜುನಾಥ ಗೌಡ -ಮಲೆನಾಡು ಅಭಿವೃದ್ಧಿ ಮಂಡಳಿ, 9 ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ, 10 ಪಲ್ಲವಿ, ಸಾಂಬಾರು ಮಂಡಳಿ, 11 ಮಂಡ್ಯ ಡಾ.ಹೆಚ್ ಕೃಷ್ಣ- ಆಹಾರ ನಿಗಮ ಸೇರಿದಂತೆ 44 ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ