ಬೆಂಗಳೂರು,ಸೆ 09 : ಕರ್ನಾಟಕ ಸರ್ಕಾರದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ವಿಕಲಚೇತನರ ಕುಂದು ಕೊರತೆಗಳ ನಿವಾರಣಾಧಿಕಾರಿಯನ್ನು ನೇಮಕ ಮಾಡುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಈ ವಿಷಯಕ್ಕೆ ಸಂಬAಧಿಸಿದAತೆ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕಲಂ-23(1) ರಲ್ಲಿ ಸರ್ಕಾರದ ಪ್ರತಿಯೊಂದು ಸಂಸ್ಥೆಯು, 19ನೇ ಪ್ರಕರಣದ ಉದ್ದೇಶಕ್ಕಾಗಿ ಒಬ್ಬರು ಕುಂದುಕೊರತೆಗಳ ನಿವಾರಣಾಧಿಕಾರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಅಂಥ ಅಧಿಕಾರಿಯ ನೇಮಕದ ಬಗ್ಗೆ ಸಂದರ್ಭಾನುಸಾರ ಚೀಫ್ ಕಮಿಷನರ್ ಗೆ ಅಥವಾ ಸ್ಟೇಟ್ ಕಮಿಷನರ್ ಗೆ ತಿಳಿಸತಕ್ಕದ್ದು ಎಂದು ನಮೂದಿಸಲಾಗಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕಲಂ-23ರನ್ವಯ “ಸರ್ಕಾರದ ಪ್ರತಿಯೊಂದು ಇಲಾಖೆ ಮತ್ತು ಅಧೀನ ಕಚೇರಿಗಳಲ್ಲಿ 19ನೇ ಪ್ರಕರಣದ ಉದ್ದೇಶಕ್ಕಾಗಿ ಒಬ್ಬರು ಕುಂದುಕೊರತೆಗಳ ನಿವಾರಣಾಧಿಕಾರಿಯನ್ನು ನೇಮಿಸುವಂತೆಯೂ ಹಾಗೂ ಈ ರೀತಿ ನೇಮಕ ಮಾಡಿದ ಅಧಿಕಾರಿಗಳ ಹೆಸರು, ಪದನಾಮ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ರಾಜ್ಯ ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಇವರಿಗೆ ಕೂಡಲೇ ಕಳುಹಿಸಲು ಕ್ರಮವಹಿಸುವಂತೆ ಈ ಮೂಲಕ ಕೋರಿದೆ.