
ಕಾರ್ಕಳ: ನ,24: ಪಡುಕುಡೂರು-ಖಜಾನೆ ಸಂಪರ್ಕ ರಸ್ತೆಯ ಸುಮಾರು 1.20 ಕಿ.,ಮೀ ರಸ್ತೆಯನ್ನು ಸುಮಾರು 2.50 ಕೋ.ರೂ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಅಭಿವೃದ್ಧಿಪಡಿಸುತ್ತಿದ್ದು, ಈ ಕಾಮಗಾರಿಯನ್ನು ಗುತ್ತಿಗೆದಾರ ಪ್ರಶಾಂತ್ ಶೆಟ್ಟಿ ಮೊಳಹಳ್ಳಿ ಎಂಬವರು ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿದ್ದಾರೆ. ಆದರೆ ಈ ಕಾಮಗಾರಿ ತನಗೆ ಸಿಕ್ಕಿಲ್ಲವೆಂಬ ಹತಾಶೆಯಿಂದ ಮುನಿಯಾಲು ಉದಯ ಶೆಟ್ಟಿಯವರು ಇದೇ ರಸ್ತೆಯನ್ನು ಅನಧಿಕೃತವಾಗಿ ಅಗೆದು ಸಾರ್ವಜನಿಕ ರಸ್ತೆಯನ್ನು ಹಾಳು ಮಾಡಿದ್ದು ಮಾತ್ರವಲ್ಲದೇ ಗುತ್ತಿಗೆದಾರನಿಗೆ ಕಿರುಕುಳ ನೀಡುತ್ತಿದ್ದು, ಇವರ ವಿರುದ್ಧ ಇಲಾಖೆ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವಿನ್ ನಾಯಕ್ ಒತ್ತಾಯಿಸಿದ್ದಾರೆ.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿ,ಕಾರ್ಕಳದಲ್ಲಿ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿಯವರ ದಬ್ಬಾಳಿಕೆ ಆರಂಭವಾಗಿದೆ. ರಾಜಕೀಯ ಪ್ರಭಾವ ಬಳಸಿ ಅಭಿವೃದ್ಧಿ ಕಾಮಗಾರಿಗಳಿಗೆ ವಿನಾ ಕಾರಣ ಅಡ್ಡಿಪಡಿಸುವುದು, ಬಿಜೆಪೆ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡುವುದು ಮಾಮೂಲಿಯಾಗಿದೆ. ಇದಕ್ಕೆ ಪೂರಕ ಎಂಬAತೆ ನ್ಯಾಯಯತವಾಗಿ ಟೆಂಡರ್ ಪಡೆದ ಗುತ್ತಿಗೆದಾರನಿಗೆ ಟಾರ್ಗೆಟ್ ಮಾಡಲಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರ ತನಗೆ ನಿಗದಿಪಡಿಸಿದ ಕಾಮಗಾರಿ ನಡೆಸಲು ರಸ್ತೆ ಅಗೆದಿದ್ದಾರೆ, ಆದರೆ ಅನಧಿಕೃತವಾಗಿ ರಸ್ತೆ ಅಗೆದಿದ್ದೀರಿ ಎಂದು ಲೋಕೋಪಯೋಗಿ ಅಧಿಕಾರಿಗಳು ಪ್ರಶಾಂತ್ ಶೆಟ್ಟಿಯವರಿಗೆ ನೋಟೀಸ್ ನೀಡಿದ್ದಾರೆ. ಅನಧಿಕೃವಾಗಿ ರಸ್ತೆ ಅಗೆದ ಮುನಿಯಾಲು ಉದಯ ಶೆಟ್ಟಿಯವರ ವಿರುದ್ಧ ಕ್ರಮಕೈಗೊಳ್ಳಬೇಕಿದ್ದ ಅಧಿಕಾರಿಗಳು ಮೌನ ವಹಿಸಿರುವುದು ಯಾಕೆ ಎಂದು ನವೀನ್ ನಾಯಕ್ ಪ್ರಶ್ನಿಸಿದರು.ಕಾಮಗಾರಿಯ ಟೆಂಡರ್ ಒಬ್ಬರ ಹೆಸರಲ್ಲಿ ಇದ್ದರೂ, ಮತ್ತೊಬ್ಬರು ಹೇಗೆ ರಸ್ತೆಯ ಕೆಲಸವನ್ನು ಪ್ರಾರಂಭಿಸಿದರು ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕು ಮಾತ್ರವಲ್ಲದೇ ಈ ಪ್ರಕರಣಕ್ಕೆ ಸಂಬAಧಿಸಿ ಸಂಪೂರ್ಣ ತನಿಖೆ ನಡೆಸಿ ಕ್ರಮಕೈಗೊಳ್ಳದಿದ್ದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ನವೀನ್ ನಾಯಕ್ ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
.
