
ಕಾರ್ಕಳ, ನ.09: ಮೀನು ಸಾಕಣೆಯ ಉದ್ದೇಶಕ್ಕಾಗಿ ರೋಹು ಮತ್ತು ಟಿಲಾಪಿಯಾ ಎಂಬ ಮೀನಿನಿಂದ ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಪ್ರತ್ಯೇಕತೆ ಮತ್ತು ಗುಣಲಕ್ಷಣದ ಬಗ್ಗೆ ಡಾ.ಬಿಸ್ವಜಿತ್ ಮೈತಿ ಇವರ ಮಾರ್ಗದರ್ಶನದಲ್ಲಿ ಎಳ್ಳಾರೆ ಹಸಲುಜಡ್ಡು ಪುಂಡಲೀಕ ನಾಯಕ್ ಮತ್ತು ಸುಮನ ದಂಪತಿಯ ಪುತ್ರ ಅಶ್ವಥ್ ನಾಯಕ್ ಇವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ನಿಟ್ಟೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಅವರ ಈ ಸಾಧನೆಯನ್ನು ಗುರುತಿಸಿದ ಶಾಸಕ ಸುನಿಲ್ ಕುಮಾರ್ ಭಾನುವಾರ ಅವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಇದರ ಸರಳ ಕಾರ್ಯಕ್ರಮದಲ್ಲಿ ಜ್ಯೋತಿ ಹರೀಶ್ ,ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ, ಸದಸ್ಯರಾದ ದೇವೇಂದ್ರ ಕಾಮತ್, ಉಷಾ, ಉದ್ಯಮಿ ದಿನೇಶ್ ಪೈ ,ಸತೀಶ್ ಪೂಜಾರಿ ಮುಳ್ಕಾಡು, ಅರುಣ್ ಹೆಗ್ಡೆ, ರೂಪಶ್ರೀ ಪ್ರಭು ಮುಂತಾದವರು ಉಪಸ್ಥಿತರಿದ್ದರು.

