ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಶಾಲೆಯ ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ದಿನಾಚರಣೆ ಅಂಗವಾಗಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಚಂದ್ರನ ಮೇಲ್ಮೈ ಹಾಗೂ ಖಗೋಳ ಮಾಹಿತಿ ಕಾರ್ಯಕ್ರಮ’ವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೇಶವ್ ಡೋಂಗ್ರೆ ಮಾಳ ಅವರು ನಕ್ಷತ್ರಗುಚ್ಛ,ಭೂಮಿಯ ಚಲನೆ,ಚಂದ್ರನ ಮೇಲ್ಮೈಯಲ್ಲಿ ಇರುವ ವಿಸ್ಮಯಗಳು,ಭೂಮಿ ಹಾಗೂ ಚಂದ್ರನ ಚಲನೆಗೆ ಇರುವ ಸಂಬAಧಗಳ ಕುರಿತಾಗಿ ಮನೋಜ್ಞವಾಗಿ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕಳಸ ಕೆ.ಪಿ.ಎಸ್. ನ ಸಂದೇಶ್ ಇವರು ಖಗೋಳದ ಬಗ್ಗೆ ಅನೇಕ ಮಾಹಿತಿ ನೀಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಶಶಿಧರ್ ಭಟ್,ಉಪಾಧ್ಯಕ್ಷೆ ಶ್ರೀಮತಿ ವಿಜಯಾ ಬಾಲಕೃಷ್ಣ ಹೆಗ್ಡೆ,ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ,ವಿಜ್ಞಾನ ಶಿಕ್ಷಕಿ ಶ್ರೀಮತಿ ಹೇಮಾ, ಎಸ್ ಡಿ ಎಂ ಸಿ ಸದಸ್ಯರು,ಪಾಲಕರು,ಸಹ ಶಿಕ್ಷಕರು, ವಿದ್ಯಾಭಿಮಾನಿಗಳು ಹಾಜರಿದ್ದರು.