Author: karavalinews

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 8 ಕಾಲುಸಂಕಗಳ ನಿರ್ಮಾಣಕ್ಕೆ ಸರಕಾರದ ಅನುಮೋದನೆ – ಶಾಸಕ ವಿ ಸುನಿಲ್‌ ಕುಮಾರ್

ಕಾರ್ಕಳ, ಜ.7: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಶಾಸಕ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಪಶ್ಚಿಮ ಘಟ್ಟದ…

ಕಾರ್ಕಳ: ಅವೈಜ್ಞಾನಿಕ ಕಾಮಗಾರಿಯಿಂದ ಹದಗೆಟ್ಟ ರಸ್ತೆ, ನೀರು ಸರಬರಾಜು ವ್ಯವಸ್ಥೆ: ಸಾರ್ವಜನಿಕರಿಂದ ಪುರಸಭೆಗೆ ಕಚೇರಿಯಲ್ಲಿ ಪ್ರತಿಭಟನೆ

ಕಾರ್ಕಳ,ಜ. 7 : ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕುಡಿಯುವ ನೀರು ಸರಬರಾಜಿಗಾಗಿ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಅವೈಜ್ಞಾನಿಕವಾಗಿ ರಸ್ತೆ ಅಗೆದು ನೀರು ಸರಬರಾಜು ಆಗುತ್ತಿದ್ದ ಪೈಪ್ ಲೈನ್ ಕಿತ್ತುಹೋಗಿ ನಳ್ಳಿನೀರು ಸಂಪರ್ಕ…

ಫೇಸ್ ಬುಕ್ ನಲ್ಲಿ ಸುಳ್ಯದ ದಲಿತ ಶಾಸಕಿ ಭಾಗೀರಥಿ ಮುರುಳ್ಯಗೆ ನಿಂದನೆ: ಎಲ್ಲೆಡೆ ವ್ಯಾಪಕ ಆಕ್ರೋಶ

ಕಾರ್ಕಳ, ಜ.07: ಸಾಮಾಜಿ ಜಾಲತಾಣವಾದ ಫೇಸ್ ಬುಕ್ಕಿನಲ್ಲಿ ಯುವಕನೋರ್ವ ಸುಳ್ಯ ವಿಧಾನಸಭಾ ಕ್ಷೇತ್ರದ ದಲಿತ ಸಮುದಾಯದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ನಿಂದಿಸಿರುವ ಘಟನೆ ನಡೆದಿದೆ. ಬಿಲ್ಲವ ಸಂದೇಶ್ ಎಂಬಾತ ತನ್ನ ಪೇಜ್ ನಲ್ಲಿ ಭಾಗೀರಥಿಯವರ ಕುರಿತು ಕೆಟ್ಟದಾಗಿ ಬರೆದಿದ್ದಾನೆ. ದಲಿತ…

ಶಾಸಕರನ್ನು ಟೀಕಿಸುವ ಭರದಲ್ಲಿ ಸಭ್ಯತೆಯ ಎಲ್ಲೆ ಮೀರುತ್ತಿರುವ ಉದಯಕುಮಾರ್ ಶೆಟ್ಟಿ : ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್ ಆಕ್ರೋಶ

ಕಾರ್ಕಳ,ಜ.7: ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆಂಬ ದೃಷ್ಟಿಯಲ್ಲಿ ಶಾಸಕ ವಿ ಸುನಿಲ್ ಕುಮಾರ್ ರವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಿದ ಮಹತ್ವಕಾಂಕ್ಷಿ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಇಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯ್…

ಅಮೃತ್ ಯೋಜನೆಯ ಕಾಮಗಾರಿ ಕರ್ಮಕಾಂಡ: 6 ತಿಂಗಳಿನಿಂದ ಕುಡಿಯುವ ನೀರಿಲ್ಲದೇ ಅನಂತಶಯನದ ಬಳಿಯ ನಿವಾಸಿಗಳ ಪರದಾಟ: ನೀರು ಪೂರೈಸುವಂತೆ ಪುರಸಭೆಗೆ ಪ್ರಕಾಶ್ ರಾವ್ ಆಗ್ರಹ

ಕಾರ್ಕಳ, ಜ.07: ಕಾರ್ಕಳ ಪುರಸಭಾ ವ್ಯಾಪ್ತಿಯ ಅನಂತಶಯನ ಬಳಿ ಅಮೃತ್ 2.0 ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅಳವಡಿಸಲು ಈ ಹಿಂದೆ ಪುರಸಭೆ ವತಿಯಿಂದ ಅಳವಡಿಸಿದ್ದ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಆದರೆ ಅಮೃತ್ ಯೋಜನೆಯ ಕಾಮಗಾರಿ ಮುಗಿದು 6…

ರಾಜ್ಯದ 12 ತಾಲೂಕುಗಳ ಜಿ.ಪಂ,ತಾ.ಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ತಕ್ಷಣ ಜಾರಿಗೆ ಬರುವಂತೆ ಹಿಂಪಡೆದ ಸರ್ಕಾರ

ಬೆಂಗಳೂರು,ಜ.07 :ರಾಜ್ಯದ 10 ಜಿಲ್ಲೆಗಳಿಗೆ ಸಂಬAಧಿಸಿದ 12 ತಾಲೂಕುಗಳ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಹಿಂಪಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ, ತುಮಕೂರು…

ಕಾರ್ಕಳ: ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಸೊತ್ತು ನಾಶ, ಜೀವ ಬೆದರಿಕೆ, ಮಹಿಳೆಯಿಂದ ದೂರು

ಕಾರ್ಕಳ, ಜ.07: ವ್ಯಕ್ತಿಯೊಬ್ಬರ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಮೂವರು ವ್ಯಕ್ತಿಗಳು ದಾಂಧಲೆ ನಡೆಸಿ ಸೊತ್ತುಗಳನ್ನು ನಾಶ ಮಾಡಿದ್ದಲ್ಲದೆ ಮಹಿಳೆಗೆ ಚಾಕು ತೋರಿಸಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣ ಕಾರ್ಕಳದಲ್ಲಿ ಜ.5 ರಂದು ನಡೆದಿದೆ. ಕಾರ್ಕಳ ಕುಕ್ಕುಂದೂರಿನ ತಾಹಿರ ಬಾನು ಎಂಬವರ…

ಕಾರ್ಕಳದ ನೂತನ ಡಿವೈಎಸ್ಪಿಯಾಗಿ ಬೆಳ್ಳಿಯಪ್ಪ ನೇಮಕ

​ಕಾರ್ಕಳ, ಜ.07:ಕಾರ್ಕಳ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ಳಿಯಪ್ಪ ಕೆ. ಯು. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಕಾರ್ಕಳದ ಎಎಸ್‌ಪಿಯಾಗಿದ್ದ ಡಾ. ಹರ್ಷಪ್ರಿಯಂವದಾ ಅವರನ್ನು ಬೆಂಗಳೂರಿನ ಸಿಐಡಿ…

ಯಕೃತ್ತು ಚಿಕಿತ್ಸೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹೊಸ ಮೈಲಿಗಲ್ಲು: ಸಮಗ್ರ ಯಕೃತ್ತು ಚಿಕಿತ್ಸೆ ಮತ್ತು ಯಕೃತ್ತುಕಸಿ ಚಿಕಿತ್ಸಾಲಯ ಆರಂಭ

ಮಣಿಪಾಲ,ಜ‌06: ಯಕೃತ್ತಿನ (ಲಿವರ್ ) ಕಾಯಿಲೆಗಳು ಸಾಮಾನ್ಯವಾಗಿ ತಪಾಸಣೆ ಮಾಡುವವರೆಗೂ ಸದ್ದಿಲ್ಲದೇ ಮುಂದುವರಿಯುತ್ತವೆ.ಆದ್ದರಿಂದ ಆರಂಭಿಕ ಹಂತದಲ್ಲೇ, ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ರೋಗ ಗುಣಪಡಿಸಬಹುದಾಗಿದೆ. ಹೊಸ ಸವಾಲುಗಳು ಮತ್ತು ಮನೆ ಬಾಗಿಲಲ್ಲೇ ವಿಶೇಷ ಆರೈಕೆಯ ತುರ್ತು ಅಗತ್ಯಕ್ಕೆ ಪ್ರತಿಕ್ರಿಯೆಯಾಗಿ,…

ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ 9 ಸಾವಿರ ಮೌಲ್ಯದ ಮರಳು ವಶಕ್ಕೆ

ಕಾರ್ಕಳ,ಜ. 06: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಟಿಪ್ಪರ್ ಸಹಿತ ಕಾರ್ಕಳ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿನ್ಸೆಂಟ್ ಎಂಬಾತ ಬ್ರಹ್ಮಾವರದ ಚೇರ್ಕಾಡಿ ಇರ್ಮುಗೋಡು ಎಂಬಲ್ಲಿ ಹೊಳೆಯಿಂದ ಅಕ್ರಮವಾಗಿ ತೆಗೆದ ಮರಳನ್ನು ಮಹಮ್ಮದ್ ಇರ್ಫಾನ್ ಎಂಬಾತನ ಟಿಪ್ಪರ್ ನಲ್ಲಿ…