Author: karavalinews

ಕಾರ್ಕಳ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ: ಮೊಬೈಲ್ ಗೀಳು ಬದುಕು ಹಾಳು : ಸುಕೇಶ್ ಶೆಟ್ಟಿ ಹೊಸಮಠ

ಕಾರ್ಕಳ,ನ. 8: ಕ್ರೀಡೆಯು ಬದುಕಿನಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಆದರೆ ಇಂದಿನ ಯುವಜನತೆ ಮೊಬೈಲ್ ಗೀಳಿಗೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಆತಂಕ ಸಮಾಜಕ್ಕಾಗಿದೆ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ದೇಶದ ಉನ್ನತಿಗೆ ಕೈಜೋಡಿಸುವವರಾಗಿ, ಸಮಾಜಮುಖಿ ವ್ಯಕ್ತಿತ್ವವಾಗಿ ರೂಪುಗೊಂಡಾಗ ಜೀವನ ಸಾರ್ಥಕವಾಗುತ್ತದೆ…

ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ನ.30 ಕೊನೆಯ ದಿನ 

ಕಾರ್ಕಳ,ನ. 8: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ನವೆಂಬರ್ 30 ಕೊನೆಯ ದಿನವಾಗಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. ಇದು ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡುತ್ತದೆ. ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ, ಯಾರಾದರೂ…

KUPMA ಒಕ್ಕೂಟದ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಕಾರ್ಕಳ: ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟ (KUPMA) ಇದರ ಉಡುಪಿ ಜಿಲ್ಲಾ ಕಾರ್ಯಕರಿಣಿ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ಡಾ. ಪ್ರಶಾಂತ್‌ ಶೆಟ್ಟಿ ದಂಡತೀರ್ಥ ಸಂಸ್ಥೆ ಕಾಪು ಹಾಗೂ ಅಧ್ಯಕ್ಷರನ್ನಾಗಿ ತ್ರಿಷಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ…

ಕಾರ್ಕಳ: ಸಾಣೂರಿನ ವ್ಯಕ್ತಿ ನಾಪತ್ತೆ

ಕಾರ್ಕಳ: ತಾಲೂಕಿನ ಸಾಣೂರು ಗ್ರಾಮದ ಪ್ರಶಾಂತ (35) ಎಂಬವರು ನ. 05 ರಿಂದ ನಾಪತ್ತೆಯಾಗಿದ್ದಾರೆ. ಅಂದು ಬೆಳಿಗ್ಗೆ 8:30 ಗಂಟೆಗೆ ಅವರ ಮನೆ ಪವಮಾನ ನಿವಾಸದಿಂದ ಕಾರಿನಲ್ಲಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್…

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಭಟ್ ಅವರಿಗೆ ಸನ್ಮಾನ

ಕಾರ್ಕಳ: ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ಜರಗುವ ವರ್ಷಾವಧಿ ಬಲಿ ಉತ್ಸವ ಮೆರವಣಿಗೆಯ ಸಂದರ್ಭ ದೇವರಾಧನೆ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ, ದೇವಳಕ್ಕೆ ಸುಮಾರು 55 ವರ್ಷಗಳಿಂದ ದೇವರು ಹೊರುವ ಬಲಿ ಸೇವೆಯನ್ನು…

ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ಬೆಂಗಳೂರು : 2011-12ನೇ ಸಾಲಿನಿಂದ ನಿವೃತ್ತಿಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.…

ನ.15 ರಂದು ಕಾರ್ಕಳದಲ್ಲಿ ಪಟ್ಲ ಫೌಂಡೇಶನ್ ನ ವಾರ್ಷಿಕ ಸಮಾರಂಭ

ಕಾರ್ಕಳ: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಕಳ ಘಟಕದ ಹತ್ತನೇ ವಾರ್ಷಿಕ ಸಮಾರಂಭವು ನವೆಂಬರ್ 15 ರಂದು ಶನಿವಾರ ಕಾರ್ಕಳ ಬಸ್ಸು ನಿಲ್ದಾಣ ಬಳಿಯ ಮಾರಿಗುಡಿ ವಠಾರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ನ…

ಮಣಿಪಾಲ ಜ್ಞಾನಸುಧಾ : ಎನ್.ಸಿ.ಸಿ. ನೇವಿ(ನೌಕಾದಳ) ಉದ್ಘಾಟನೆ: ಜೀವನದ ಆಕಾಂಕ್ಷೆಗಳ ಜೊತೆಗೆ ದೇಶ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು- ಕ್ಯಾಪ್ಟನ್ ಗಣೇಶ್ ಕಾರ್ಣಿಕ್- ಕಲ್ಪವೃಕ್ಷದಂತೆ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ : ಕಮಾಂಡರ್ ಅಶ್ವಿನ್ ಎಂ. ರಾವ್

ಕಾರ್ಕಳ: ನಮ್ಮ ಜೀವನದಲ್ಲಿರುವ ಎಲ್ಲಾ ರೀತಿಯ ಆಸೆ ಆಕಾಂಕ್ಷೆ, ಕನಸುಗಳನ್ನು ಸಿಗುವ ಅವಕಾಶಗಳಿಂದ ಈಡೇರಿಸಿಕೊಳ್ಳುವುದರ ಜೊತೆಗೆ, ದೇಶ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಮನಸ್ಸಿನ ನಿಗ್ರಹ ನಮ್ಮ ಹತೋಟಿಗೆ ಬರುವುದು ಶಿಕ್ಷಣದಿಂದ ಮಾತ್ರ. ಅದರೊಂದಿಗೆ ಎನ್.ಸಿ.ಸಿ ಯಂತಹ ಅತ್ಯುತ್ತಮ ಸಂಘಟನೆಯನ್ನು…

ವಂದೇ ಮಾತರಂಗೆ 150 ವರ್ಷದ ಸಂಭ್ರಮ : ಕಾರ್ಕಳ ಬಿಜೆಪಿ ವತಿಯಿಂದ ವಂದೇ ಮಾತರಂ ಗಾಯನ

ಕಾರ್ಕಳ : ವಂದೇ ಮಾತರಂ ಗೀತೆಗೆ 150 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಅ. 7ರಂದು ಬೆಳಿಗ್ಗೆ 10.30ಕ್ಕೆ ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮವು ವಿಕಾಸ ಕಚೇರಿಯಲ್ಲಿ ಶಾಸಕರು ಮಾಜಿ ಸಚಿವರಾದ ವಿ ಸುನಿಲ್‌ ಕುಮಾರ್‌ ಉಪಸ್ಥಿತಿಯಲ್ಲಿ ಕಾರ್ಕಳದ ಮಂಡಲಾಧ್ಯಕ್ಷರಾದ…

ಅನ್ನಭಾಗ್ಯ ಯೊಜನೆ :ಇಂದಿರಾ ಕಿಟ್ ನಲ್ಲಿ ಹೆಸರುಕಾಳಿನ ಬದಲು ತೊಗರಿಬೇಳೆ ನೀಡಲು ನಿರ್ಧಾರ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ಘೋಷಿಸಿದ್ದ ಸರ್ಕಾರ, ಅದರಲ್ಲಿ ನೀಡಲು ಉದ್ದೇಶಿಸಿದ್ದ ಆಹಾರ ಧಾನ್ಯಗಳನ್ನು ಪರಿಷ್ಕರಣೆ ಮಾಡಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ‘ಇಂದಿರಾ ಪೌಷ್ಟಿಕ ಆಹಾರ…