
ನವದೆಹಲಿ,ಡಿ. 15 : ತಾಂತ್ರಿಕ ಸಮಸ್ಯೆ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ತೀವ್ರ ವ್ಯತ್ಯಯವಾಗಿತ್ತು.
ಇದೀಗ ನವದೆಹಲಿಯಲ್ಲಿ ಮತ್ತೆ ಇಂಡಿಗೋ ವಿಮಾನ ಹಾರಾಟದಲ್ಲಿ ಸಮಸ್ಯೆ ಆಗಿದ್ದು, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಹಾರಾಟ ವಿಳಂಬವಾಗಿದೆ.ಇದರಿಂದಾಗಿ ರಾಜ್ಯಕ್ಕೆ ಬರಲು ಹೊರಟಿದ್ದ ಘಟಾನುಘಟಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲೇ ಉಳಿಯುವಂತಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್,ಶರಣ ಪ್ರಕಾಶ ಪಾಟೀಲ್, ಸಲೀಂ ಅಹಮದ್ ಸೇರಿದಂತೆ ಹಲವು ನಾಯಕರು ಅಗಲಿದ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನ ಪಡೆಯಲು ಹೊರಟಿದ್ದರು. ಇದರಿಂದ ಸುಮಾರು 20 ಕ್ಕೂ ಹೆಚ್ಚು ಶಾಸಕರು ಇಂಡಿಗೋ ವಿಮಾನದಲ್ಲೇ ಲಾಕ್ ಆಗಿದ್ದಾರೆ.
ಸೋಮವಾರ ಬೆಳಿಗ್ಗೆ 6:45 ಕ್ಕೆ ಇಂಡಿಗೋ ವಿಮಾನ ಟೇಕ್ ಆಫ್ ಆಗಬೇಕಾಗಿತ್ತು. ಆದರೆ ಚಳಿಯಿಂದಾಗಿ ಮಂಜು ಕವಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ವಿಳಂಬವಾಗಿದೆ.
.
.
