ಕಾರ್ಕಳ: ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿಯಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿ ದಿಡಿಂಬಿರಿ ಕ್ರಾಸ್ ಬಳಿ ಸೋಮವಾರ ರಾತ್ರಿ ಗಂಟೆಗೆ ಬಾಗಲಕೋಟೆ ಮೂಲದ ಲಾಲಾಸಾಬ್ ಮೊಖಾಶಿ (48 ವರ್ಷ) ಎಂಬವರು ರಸ್ತೆ ಬದಿಯಲ್ಲಿ ನಿಂತುಕೊAಡಿದ್ದ ವೇಳೆ ಕಾರ್ಕಳದಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಬಸ್ ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಲಾಲ್ ಸಾಬ್ ಮೊಖಾಶಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















